ರಾಜಧಾನಿ ಬೆಂಗಳೂರು ( BANGALORE )ಜನರ ಜೀವನಾಡಿ ಎಂದು ಕರೆಸಿಕೊಳ್ಳುವ ಬಿಎಂಟಿಸಿ (BMTC)ಸಂಕಷ್ಟ ಸ್ಥಿತಿಯಲ್ಲಿದೆ. ಇದೀಗ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾರಿಗೆ ಸಂಸ್ಥೆ ಯಡವಟ್ಟು ಮಾಡಲು ಹೊರಟಂತಿದೆ. ಈ ಮೂಲಕ ತಮ್ಮ ಆರ್ಥಿಕ ಸಂಕಷ್ಟಕ್ಕೆ ಜನರ ಜೀವವನ್ನು ಆಪತ್ತಿಗೆ ತಳ್ಳಲು ಸಾರಿಗೆ ಸಂಸ್ಥೆಗಳು ಮುಂದಾಗುತ್ತಿದೆಯಾ ಎಂಬ ಪ್ರಶ್ನೆಯೊಂದು ಎದ್ದಿದೆ.
ಇದಕ್ಕೆ ಕಾರಣ ಬಿಎಂಟಿಸಿಯು ಗುಜರಿಗೆ ಹಾಕಬೇಕಾದ ಬಸ್ಗಳನ್ನು ವಾಯವ್ಯ ಸಾರಿಗೆ ಸಂಸ್ಥೆಗೆ (ಎನ್ಡಬ್ಲ್ಯೂಕೆಆರ್ಟಿಸಿ) ಮಾರಾಟ ಮಾಡಲಿದೆ ಎನ್ನಲಾಗಿದೆ. ಒಂದು ಬಸ್ ಗೆ 50 ಸಾವಿರ ರೂ. ನಿಗದಿ ಮಾಡಿ ವಾಯವ್ಯ ಸಾರಿಗೆಗೆ ಬಿಎಂಟಿಸಿ (BMTC) ಬಸ್ ಮಾರಾಟ ಮಾಡಲು ಮುಂದಾಗಿದೆಯಂತೆ. ಇದನ್ನೂ ಓದಿ : – ಬೆಂಗಳೂರಿನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ
9 ಲಕ್ಷ ಕಿ.ಮೀ ಓಡಿದ ಬಿಎಂಟಿಸಿ ಬಸ್ ಗಳನ್ನು ಬಳಸಲು ಯೋಗ್ಯವಿಲ್ಲದ ಕಾರಣ ಗುಜರಿಗೆ ಹಾಕಲು ನಿರ್ಧರಿಸಲಾಗಿತ್ತು. ಇದೀಗ ಇದೇ ಗುಜರಿ ಬಸ್ ಗಳಿಗೆ ವಾಯವ್ಯ ಸಾರಿಗೆ ಸಂಸ್ಥೆ ಬೇಡಿಕೆ ಇಟ್ಟಿದೆ. ಸ್ಕ್ರಾಪ್ ಮಾಡೋ ಬದಲಿಗೆ ನಮಗೆ ನೀಡಿ, ನಾವು ಅದೇ ಹಳೇ ಬಸ್ ಗಳನ್ನ ರಸ್ತೆಗಿಳಿಸುತ್ತೇವೆ ಎಂದಿದ್ದಾರೆ. ಸದ್ಯ 50 ಸಾವಿರಕ್ಕೆ ಹಳೆ ಗುಜರಿ ಬಸ್ ಮಾರಾಟಕ್ಕೆ ನಿರ್ಧರಿಸಲಾಗಿದೆ. ಈ ಬಗ್ಗೆ ನಿರ್ದೇಶಕರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಬಿಎಂಟಿಸಿ ಬಸ್ ಗಳನ್ನು ವಾಯವ್ಯ ಸಾರಿಗೆಗೆ ಮಾರಾಟ ಮಾಡಲು ಅನೌಪಚಾರಿಕವಾಗಿ ಮಾತುಕತೆ ನಡೆದಿತ್ತು. ಉಚಿತವಾಗಿ ಬಸ್ ನೀಡಿದರೆ ಮುಂದೊಂದು ದಿನ ಆಡಿಟ್ ಕೆಲಸದಲ್ಲಿ ತಡೆ ಬರುತ್ತದೆ. ಈ ಕಾರಣಕ್ಕೆ ಉಚಿತವಾಗಿ ನೀಡುವ ಬದಲು ಕನಿಷ್ಠ ಒಂದು ಬಸ್ ಗೆ ಒಂದು ಲಕ್ಷ ರೂಪಾಯಿ ಕೊಟ್ಟು ಬಸ್ ತಗೊಂಡು ಹೋಗಬಹುದು ಎಂಬ ಬಗ್ಗೆ ಮಾತುಕತೆ ಆಗಿದೆ. ಆದರೆ, ಇದಕ್ಕೆ ಅಂತಿಮ ಅನುಮೋದನೆ ಸಿಗಲು ನಿರ್ದೇಶಕರ ಮಂಡಳಿ ಸಭೆಯಲ್ಲಿ ನಿರ್ಧಾರವಾಗಬೇಕು ಎನ್ನಲಾಗಿದೆ.
ಇದನ್ನೂ ಓದಿ : – ಪ್ರಸನ್ನನಂದಾಪುರಿ ಸ್ವಾಮೀಜಿ ಆರೋಗ್ಯ ವಿಚಾರಿದ ಸಿಎಂ ಬೊಮ್ಮಾಯಿ