ಬಾಲಿವುಡ್ ನಟಿ ಕಂಗನಾ ರಣಾವತ್ ಟ್ವೀಟರ್ ಖಾತೆಯನ್ನು ಅಮಾನತು ಮಾಡಲಾಗಿದೆ. ಸಾಲು ಸಾಲು ವಿವಾದಾತ್ಮಕ ಟ್ವೀಟ್ ಮಾಡಿದ ಕಂಗನಾ ವಿರುದ್ಧ ಅನೇಕರು ರಿಪೋರ್ಟ್ ಮಾಡಿದ್ದರು. ಆ ಹಿನ್ನೆಲೆ ಕಂಗನಾ ಖಾತೆಯನ್ನ ಅಮಾನತು ಮಾಡಲಾಗಿದೆ.
ಮೈಕ್ರೋ ಬ್ಲಾಗಿಂಗ್ ಸೈಟ್ ನಿಯಗಳಿಗೆ ವಿರುದ್ಧವಾಗಿ ಪದಗಳನ್ನು ಬಳಸಿ ಟ್ವೀಟ್ ಮಾಡುತ್ತಿದ್ದ ಕಾರಣ ಸಸ್ಪೆಂಡ್ ಮಾಡಲಾಗಿದೆ ಎಂದು ಕಾರಣ ನೀಡಲಾಗಿದೆ.
ಇತ್ತೀಚೆಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಗೆದ್ದ ಬಳಿಕ ಬಂಗಾಳದಲ್ಲಿ ಹಿಂಸಾಚಾರ ಜಾಸ್ತಿ ಆಗಿದೆ. ಅಧ್ಯಕ್ಷೀಯ ಆಡಳಿತ ತರಬೇಕು ಎಂದು ಒತ್ತಾಯಿಸಿದ್ದರು. ನೂರಾರು ಕೊಲೆಗಳು ನಡೆಯುತ್ತಿವೆ ಎಂದು ಟ್ವೀಟ್ ಮಾಡಿದ್ದರು.