ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಬಾಲಿವುಡ್ ನಟಿ ಪೂಜಾ ಭಟ್

ನಟಿ, ಸಿನಿಮಾ ನಿರ್ಮಾಪಕಿ ಪೂಜಾ ಭಟ್ ( pooja bhat ) ಇಂದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.

ನಟಿ, ಸಿನಿಮಾ ನಿರ್ಮಾಪಕಿ ಪೂಜಾ ಭಟ್ ( pooja bhat ) ಇಂದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಭಾರತ್ ಜೋಡೊ ಯಾತ್ರೆಗೆ ಸೇರಿದ ಮೊದಲ ಬಾಲಿವುಡ್ ಸೆಲೆಬ್ರಿಟಿಯಾಗಿದ್ದಾರೆ ಪೂಜಾ ಭಟ್. ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡುತ್ತಾ ಪೂಜಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು ಅವರನ್ನು ಕಂಡ ಕೂಡಲೇ ಜನರ ಹರ್ಷಕ್ಕೆ ಪಾರವೇ ಇರಲಿಲ್ಲ.


ನಟ-ನಿರ್ದೇಶಕ-ನಿರ್ಮಾಪಕರಾಗಿರುವ ಪೂಜಾ, ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಧ್ವನಿಯೆತ್ತಿದ್ದಾರೆ. ಅವರು 1989 ರ ಚಲನಚಿತ್ರ “ಡ್ಯಾಡಿ” ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು. ಹಿರಿಯ ಚಿತ್ರನಿರ್ಮಾಪಕ ಮಹೇಶ್ ಭಟ್ ಅವರ ಪುತ್ರಿ ಆಗಿರುವ ಪೂಜಾ”ದಿಲ್ ಹೈ ಕಿ ಮಾನ್ತಾ ನಹೀ”, “ಸಡಕ್”, “ಫಿರ್ ತೇರಿ ಕಹಾನಿ ಯಾದ್ ಆಯೀ”, ಸರ್ ಮತ್ತು “ಝಕ್ಮ್” ಮೊದಲಾದ ಸಿನಿಮಾಗಳಲ್ಲಿ ಮಿಂಚಿದ್ದರು.  ಇದನ್ನೂ ಓದಿ : –  ಪಕ್ಷದಿಂದ ವಲಸೆ ಹೋದವರಿಗೂ ಮುಕ್ತ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್

ತಮನ್ನಾ, ಸುರ್, ಪಾಪ್ ಮತ್ತು ಹಾಲೀಡೇ ಇವರು ನಿರ್ದೇಶಿಸಿದ ಚಿತ್ರಗಳು. ಹೈದರಾಬಾದ್ ಸಿಟಿಯ ಬಾಲನಗರ ಮುಖ್ಯ ರಸ್ತೆಯ ಎಂಜಿಬಿ ಬಜಾಜ್ ಶೋರೂಮ್ ನಿಂದ ಯಾತ್ರೆ ಪುನರಾರಂಭವಾಗಿದ್ದು ರಾಹುಲ್ ಗಾಂಧಿ ( rahul gandhi ) ಜೊತೆಗೆ ಇತರ ಭಾರತ್ ಯಾತ್ರಿಗಳು ಯಾತ್ರೆಯ 56 ನೇ ದಿನದಂದು ತಮ್ಮ ನಡಿಗೆಯನ್ನು ಮುಂದುವರೆಸಿದರು.

 ಇದನ್ನೂ ಓದಿ : – ಕಾಡು ಪ್ರಾಣಿಗಳ ದಾಳಿಯಿಂದ ಮೃತರಾದ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಿ – JDS ಶಾಸಕರ ಆಗ್ರಹ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!