ಬಿಜೆಪಿ ಸಂಸದೀಯ ಮಂಡಳಿ, ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ಸಿಕ್ಕಿದ್ದಕ್ಕೆ ಬೆಂಗಳೂರಿನ ‘ಕಾವೇರಿ’ ನಿವಾಸದಲ್ಲಿ BSY ಗೆ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಲಾಗಿದೆ. ಸಚಿವರು, ಶಾಸಕರು ಯಡಿಯೂರಪ್ಪ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.
ಬಿಎಸ್ವೈ ಕಾವೇರಿ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಬಿಎಸ್ ಯಡಿಯೂರಪ್ಪ ಅವರಿಗೆ ಅತ್ಯಂತ ಉನ್ನತ ಸ್ಥಾನ ನೀಡಿದ್ದಕ್ಕೆ ಸಂತಸವಾಗಿದೆ. ಇದು ಸುದೀರ್ಘ ಅನುಭವ, ರಾಜಕೀಯ ಹೋರಾಟಕ್ಕೆ ಮನ್ನಣೆ ಎಂದಿದ್ದಾರೆ. ಬಿಎಸ್ವೈಗೆ ಜವಾಬ್ದಾರಿ ನೀಡಿದ್ದಕ್ಕೆ ಹೈಕಮಾಂಡ್ಗೆ ಧನ್ಯವಾದಗಳು ಎಂದ ಬೊಮ್ಮಾಯಿ ಇದು ದೂರದೃಷ್ಟಿಯ ತೀರ್ಮಾನ ಎಂದಿದ್ದಾರೆ. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಬಹಳ ಸಕ್ರಿಯರಾಗಿದ್ದರು.
ಯಡಿಯೂರಪ್ಪ ಮಾರ್ಗದರ್ಶನದಲ್ಲೇ ನಾನು ನಡೆಯುತ್ತಿದ್ದೇನೆ. ಇದನ್ನು ನಾನು ಸಿಎಂ ಸ್ಥಾನ ಸ್ವೀಕರಿಸಿದಾಗಲೇ ಹೇಳಿದ್ದೇನೆ. ರಾಜ್ಯ ಹಾಗೂ ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಸಿಕ್ಕಿದೆ. ಬಿಎಸ್ವೈಗೆ ಜವಾಬ್ದಾರಿ ನೀಡಿದ್ದರಿಂದ ನಮ್ಮ ಉತ್ಸಾಹ ಹೆಚ್ಚಾಗಿದೆ. 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದು ಶತಃಸಿದ್ಧ. ವಿಪಕ್ಷಗಳ ಸರ್ವೆ ಯಾವ ರೀತಿ ಮಾಡಿದ್ದಾರೆಂದು ನಮಗೆ ಗೊತ್ತಿದೆ. ಹೀಗಾಗಿ ಮತ್ತೆ ಅಧಿಕಾರಕ್ಕೆ ಬರೋದು ನೂರಕ್ಕೆ ನೂರರಷ್ಟು ಖಚಿತ. ಬಿಎಸ್ವೈಗೆ ಹುದ್ದೆ ನೀಡಿದ್ದು ಪ್ರಮೋಷನ್ ಅಲ್ಲ, ಡಿಮೋಷನ್ ಅಲ್ಲ. ಯಡಿಯೂರಪ್ಪಗೆ ಹೊಣೆ ನೀಡಿದ್ದು ಮಿಷನ್ ದಕ್ಷಿಣ ಭಾಗ ಮತ್ತು ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಬರಬೇಕು ಎಂಬುದರ ಎರಡೂ ಭಾಗ ಎಂದು ಸಿಎಂ ಬೊಮ್ಮಾಯಿ ಹೇಳಿದ್ರು. ಇದನ್ನೂ ಓದಿ : – ಬಿಜೆಪಿಯ ಅಭಿವೃದ್ಧಿಗೆ ಇನ್ನೊಂದು ಹೆಸರು ಯಡಿಯೂರಪ್ಪ-ಎಂ. ಪಿ. ರೇಣುಕಾಚಾರ್ಯ
ಹೈಕಮಾಂಡ್ ದೊಡ್ಡ ಜವಾಬ್ದಾರಿ ನೀಡಿದೆ- BSY
ಬಿಜೆಪಿಯ ಕೇಂದ್ರೀಯ ಸಂಸತ್ತು ಮಂಡಳಿಗೆ ಮತ್ತು ಕೇಂದ್ರೀಯ ಚುನಾವಣಾ ಸಮಿತಿಗೆ ನನ್ನನ್ನು ಆಯ್ಕೆ ಮಾಡಿ, ಬಹಳ ದೊಡ್ಡ ಜವಾಬ್ದಾರಿಯನ್ನು ವರಿಷ್ಠರು ನೀಡಿದ್ದಾರೆ. ನಾನು ಯಾವತ್ತಿಗೂ ಯಾವುದೇ ಸ್ಥಾನಮಾನ ನಿರೀಕ್ಷೆ ಮಾಡಿರಲಿಲ್ಲ. ಈಗ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ರು. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವುದು ನನ್ನ ಕನಸು. ದಕ್ಷಿಣ ಭಾರತದ ರಾಜ್ಯಗಳ ಪ್ರವಾಸ ಮಾಡಿ, ವರಿಷ್ಠರು ಏನು ಹೇಳ್ತಾರೋ ಅದರಂತೆ ಅಲ್ಲಿ ಕೆಲಸ ಮಾಡುತ್ತೇನೆ. ನಾನು ಎಂದಿಗೂ ರಾಜಕೀಯ ಜೀವನದಲ್ಲಿ ನಿವೃತ್ತಿ ಜೀವನ ಬಯಸಿಲ್ಲ ಅಂದರು.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನನಗೆ ಒಂದೇ ಒಂದು ಸಂಕಲ್ಪ ಇತ್ತು. ಕರ್ನಾಟಕದಲ್ಲಿ ಎಲ್ಲಾ ನಾಯಕರ ಜೊತೆಗೂಡಿ ಮತ್ತೆ ಅಧಿಕಾರಕ್ಕೆ ತರಬೇಕು ಅನ್ನೋದು ಆಸೆಯಿತ್ತು. ಈಗ ದಕ್ಷಿಣ ಭಾರತ ರಾಜ್ಯಗಳನ್ನು ನೋಡುವಂತೆಯೂ ವರಿಷ್ಠರು ಸೂಚನೆ ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಾಮಾನ್ಯ ಕಾರ್ಯಕರ್ತನ ಕೆಲಸ ಗುರುತಿಸ್ತಾರೆ ಅನ್ನೋದಕ್ಕೆ ನಾನೇ ಉದಾಹರಣೆ ಅಂತಾ ಹೇಳಿದರು.
ಇದನ್ನೂ ಓದಿ : – ಬಿಜೆಪಿಯವರ ಬಯಕೆ ಶ್ರೀರಾಮುಲು ಹೇಳಿಕೆಯಿಂದ ವ್ಯಕ್ತವಾಗಿದೆ – ಕಾಂಗ್ರೆಸ್ ಟ್ವೀಟ್