ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಗುಜರಾತ್ ರಾಜಧಾನಿ ಅಹಮದಾಬಾದ್‌ಗೆ ಬಂದಿಳಿದಿದ್ದಾರೆ. ಅವರಿಗೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ್, ವಿವಿಧ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭವ್ಯ ಸ್ವಾಗತ ನೀಡಿದ್ರು.
ವಿಮಾನ ನಿಲ್ದಾಣದಿಂದ ಅವರು ವಾಸ್ತವ್ಯ ಹೂಡಿರುವ ಅಹಮದಾಬಾದ್‌ನ ಹೋಟೆಲ್‌ಗೆ ಇರುವ ನಾಲ್ಕು ಕಿಮೀ ಅಂತರದ ಉದ್ದಕ್ಕೂ ಅದ್ದೂರಿ ಸ್ವಾಗತ ನೀಡಲಾಯಿತು. ವಿಮಾನ ನಿಲ್ದಾಣದಲ್ಲಿ ಗುಜರಾತಿ ಸಾಂಪ್ರದಾಯಿಕ ನೃತ್ಯ ಮತ್ತು ಸಂಗೀತದೊಂದಿಗೆ ಸ್ವಾಗತಿಸಲಾಯಿತು.
ಜಾನ್ಸನ್ ಪ್ರಧಾನಿ ಮೋದಿಯನ್ನು ಶುಕ್ರವಾರ ಭೇಟಿ ಮಾಡಲಿದ್ದು, ಇಬ್ಬರೂ ರಕ್ಷಣೆ ಮತ್ತು ವ್ಯಾಪಾರ ಹಾಗೂ ಇತರೆ ವಿಚಾರಗಳ ಬಗ್ಗೆ ಚರ್ಚಿಸುವ ನಿರೀಕ್ಷೆ ಇದೆ. ಬಿಲಿಯನ್‌ಗಟ್ಟಲೆ ಪೌಂಡ್‌ನಲ್ಲಿ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು ವೃದ್ಧಿಸಬಲ್ಲ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಪ್ರತಿಯಾಗಿ ಭಾರತಕ್ಕೆ ಇನ್ನಷ್ಟು ವೀಸಾಗಳನ್ನು ನೀಡುವ ಆಫರ್‌ಗೆ ಸಿದ್ಧ ಇರುವುದಾಗಿ ಜಾನ್ಸನ್ ಸುಳಿವು ನೀಡಿದ್ದಾರೆ.
ಇದನ್ನು ಓದಿ :- ಸೂರ್ಯಾಸ್ತದ ಬಳಿಕ ಕೆಂಪು ಕೋಟೆಯಲ್ಲಿ ಮೋದಿ ಭಾಷಣ