ಬ್ರಿಟನ್ ಸಂಸತ್ ನಲ್ಲಿ ಸೋಮವಾರ ಸಂಜೆ ನಡೆದ ಗೌಪ್ಯ ಮತದಾನದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ವಿಶ್ವಾಸ ಮತ ಗೆಲ್ಲುವ ಮೂಲಕ ತಮ್ಮ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ.
ಸಂಸತ್ ನಲ್ಲಿ ನಡೆದ ರಹಸ್ಯ ಮತದಾನದಲ್ಲಿ ಬೋರಿಸ್ ಜಾನ್ಸನ್ ಪರ 211 ಮತಗಳು ಚಲಾವಣೆಯಾದರೆ, ವಿರುದ್ಧ 148 ಮತಗಳನ್ನು ಅವರದ್ದೇ ಪಕ್ಷದ ಸಂಸದರು ಹಾಕಿದ್ದಾರೆ. ಕೋವಿಡ್ ಸಾಂಕ್ರಾಮಿಕದ ವೇಳೆ ಲಾಕ್ಡೌನ್ ಇದ್ದರೂ ಪಾರ್ಟಿಗಳಲ್ಲಿ ಭಾಗವಹಿಸಿದ್ದು, ಕೋವಿಡ್ ನಿರ್ವಹಣೆಯಲ್ಲಿ ವಿಫಲರಾಗಿದ್ದು ಪಕ್ಷದ ಘನತೆಗೆ ಸಾರ್ವಜನಿಕವಾಗಿ ಧಕ್ಕೆ ತಂದಿದೆ ಎಂದು ಸ್ವಪಕ್ಷೀಯರೇ ಬೋರಿಸ್ ಅವರ ವಿರುದ್ಧ ಆರೋಪಿಸಿದ್ದರು. ಇದನ್ನೂ ಓದಿ : – ನೋಟುಗಳ ಮೇಲೆ ಮಹಾತ್ಮಾ ಗಾಂಧಿ ಚಿತ್ರ ಮುಂದುವರೆಯಲಿದೆ – ಆರ್ ಬಿಐ ಸ್ಪಷ್ಟನೆ
ಹೀಗಾಗಿ ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಕನ್ಸರ್ವೇಟಿವ್ ಪಾರ್ಟಿಯ ಹಲವು ಸದಸ್ಯರು ಬ್ರಿಟನ್ ಸಂಸತ್ನಲ್ಲಿ ಬೋರಿಸ್ ಜಾನ್ಸನ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದು ‘ಬ್ಯಾಕ್ಬೆಂಚ್ 1922 ಕಮಿಟಿಯ ಮುಖ್ಯಸ್ಥ ಸರ್ ಗ್ರಹಮ್ ಬ್ರಾಡಿ ಇತ್ತೀಚೆಗೆ ಹೇಳಿದ್ದರು. ಅಂತಿಮವಾಗಿ ಜಾನ್ಸನ್ ಅವರು ಶೇ 58.6 ಮತ ಪಡೆಯುವ ಮೂಲಕ ವಿಶ್ವಾಸಮತ ಗೆದ್ದಿದ್ದಾರೆ. ಈ ಫಲಿತಾಂಶವನ್ನು ಒಳ್ಳೆ ಸುದ್ದಿ ಮತ್ತು ನಿರ್ಣಾಯಕ ಎಂದು ಬೋರಿಸ್ ಜಾನ್ಸನ್ ವಿಶ್ಲೇಷಿಸಿದ್ದು, ಒಗ್ಗಟ್ಟಿನಿಂದ ಮುನ್ನಡೆಯಲು ಫಲಿತಾಂಶ ಅವಕಾಶ ಕಲ್ಪಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : – ₹2000 ನೋಟುಗಳ ಸಂಖ್ಯೆ ಭಾರೀ ಇಳಿಕೆ! ಕುತೂಹಲ ಕೆರಳಿಸಿದ ಮೋದಿ ನಡೆ..!