ಎಂಎಲ್ಸಿ ಚುನಾವಣೆ ಟಿಕೆಟ್ ಘೋಷಣೆಗೂ ಮೊದಲೇ ಹೊರಟ್ಟಿಯವರು ಪ್ರಚಾರ ಆರಂಭಿಸಿದ್ದಾರೆ . ನನಗೆ ಟಿಕೆಟ್ ಅಂತಾ ತಿಳಿದುಕೊಂಡಿದ್ದೇನೆ . ಚೇರಿಗೆ ಬರ್ತಿವಾ? ಎಂದು ಬಸವರಾಜ್ ಹೊರಟ್ಟಿ (BASAVARAJ HORATTI ) ಯವರು ಹೇಳಿದ್ದಾರೆ .
ಧಾರವಾಡದಲ್ಲಿ ಮಾತನಾಡಿದ ಅವರು ನಿನ್ನೆ ಬಿಜೆಪಿ ಸದಸ್ಯತ್ವ ಮಾಡಿಕೊಂಡಿದ್ದಾರೆ . ಪಕ್ಷದ ಅಭ್ಯರ್ಥಿ ನೀವೆ ಅಂತಾನೂ ಹೇಳಿದ್ದಾರೆ. ಚುನಾವಣೆ ಟೈಟ್ ಇಲ್ಲ . 2010ರಲ್ಲಿ ಹಾಗೆ ಇತ್ತು . ಚುನಾವಣೆ ಬಂದಾಗ ನಾನು ಟೆನ್ಷನ್ನಲ್ಲಿರುತ್ತೇನಷ್ಟೇ . ಕಳೆದ ಸಲ 3800ರಿಂದ ಲೀಡ್ ಆಗಿದ್ದೇನೆ .ಈ ಸಲವೂ ಮಾಮೂಲಿ ಇದೆ . ಚುನಾವಣೆ ಬಗ್ಗೆ ಭಯ ಇಲ್ಲ . ಶಿಕ್ಷಕರೆಲ್ಲ ನನ್ನ ಪರವಾಗಿದ್ದಾರೆ . ಸುಮಾರು 10ರಿಂದ 15 ಪ್ರತಿಶತ ವಿರೋಧ ಇದೆ . ಅದು ಮೊದಲಿನಂದಲೂ ಇದ್ದೇ ಇದೆ . ಅದಕ್ಕೆ ಬೇರೆ ಬೇರೆ ಕಾರಣಗಳಿವೆ . ಮೋಹನ ಲಿಂಬಿಕಾಯಿ ಅಭ್ಯರ್ಥಿ ಎನ್ನುತ್ತಿರೋ ವಿಚಾರ . ಅದು ನನಗೆ ಗೊತ್ತಿಲ್ಲ . ನನ್ನದು ಮಾತ್ರ ನಾ ಹೇಳಬಲ್ಲೇ . ಬೇರೆಯವರದ್ದು ಹೇಗೆ ಹೇಳಲಿ? ರಾಜ್ಯಮಟ್ಟದ ನಾಯಕರು ಬಿಜೆಪಿ ಅಭ್ಯರ್ಥಿ ಅಂತಾ ಹೇಳಿ ಪಕ್ಷಕ್ಕೆ ತಂದಿದ್ದಾರೆ . ಹೀಗಾಗಿ ಬಿಜೆಪಿ ಅಭ್ಯರ್ಥಿಯಾಗುವೆನೆಂಬ ನಂಬಿಕೆ ಇದೆ . ಇದನ್ನೂ ಓದಿ :- ಹೊರಟ್ಟಿಯವರಿಗೆ ಟಿಕೆಟ್ ಫೈನಲ್ ಆಗುತ್ತೆ – ಅರವಿಂದ ಬೆಲ್ಲದ್
ಇಂತಹುದು ಇದ್ದಾಗ ಹೇಗೆ ಬದಲಾಗುತ್ತೆ? ಅಧಿಕಾರಕ್ಕಾಗಿ ಬಿಜೆಪಿ ಸೇರಿದ್ದಾರೆಂಬ ಆರೋಪ ವಿಚಾರ . ಹೆಂಗೆ ನಡೆದರೂ ಒಂದು ಅಂತಾರೆ . ಅಂತಹ ಪ್ರಸಂಗ ಬರುತ್ತವೆ . ಕೆಲವೊಮ್ಮೆ ಡಿಸೆಂಬರ್ನಲ್ಲಿ ಮಳೆ ಬರುತ್ತೆ . ಯಾಕೆ ಆಗುತ್ತೆ ಅಂದ್ರೆ ಏನು ಹೇಳಬೇಕು . ನಾ ಎಲ್ಲಿ ಇದ್ದರೂ ಕಫರ್ಟ್ ಆಗಿಯೇ ಇದೇನಿ . ಈಗಷ್ಟೇ ಪಕ್ಷದೊಳಗೆ ಸೇರುತ್ತಿದ್ದೇನೆ . ಕಫರ್ಟ್ ಆಗುತ್ತಾ ಇಲ್ಲ ಹೇಳುವುದಿಲ್ಲ . ನಾ ಎಲ್ಲಿಯೇ ಹೋದರೂ ಆಯಾ ನಿಮಯಕ್ಕೆ ಹೊಂದಿಕೊಂಡು ಇರುವೆ . ನಾಳೆ ಒಂದು ನಾಮಪತ್ರ ಸಲ್ಲಿಸುತ್ತೇವೆ . ಮೇ 26ಕ್ಕೆ ಸಿಎಂ ಬರ್ತಾರೆ . ಮೇ 26ರಂದು ಎಲ್ಲ ನಾಯಕರೂ ಬರ್ತಾರೆ . ಸಿಎಂ ನಾನೂ ಬರುವೆ ಅಂತಾ ಹೇಳಿದ್ದಾರೆ .ಹೀಗಾಗಿ 26ಕ್ಕೆ ನಾಮಪತ್ರ ಇನ್ನೊಮ್ಮೆ ಸಲ್ಲಿಸುತ್ತೇವೆ ಎಂದು ಹೊರಟ್ಟಿ ತಿಳಿಸಿದ್ರು . ಇದನ್ನೂ ಓದಿ : – ಸಿಎಂ ಇಬ್ರಾಹಿಂ ಅವಕಾಶವಾದಿ ರಾಜಕಾರಣಿ – ಸಲೀಂ ಅಹಮದ್