ಜೆಡಿಎಸ್ ನವರ (JDS) ಜೊತೆ ಹೋಗಿ ನಾವು ಕೆಟ್ಟಿರೋದು. ಪಾರ್ಲಿಮೆಂಟ್ ಎಲೆಕ್ಷನ್‌ನಲ್ಲಿ (Parliment election) ಜೆಡಿಎಸ್ ಜೊತೆ ಹೊಗಿದ್ದಕ್ಕೆ ಕೆಟ್ಟಿದ್ದು ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ರಾಜ್ಯಸಭೆಯಲ್ಲಿ (Rajyasabha) ಬಿಜೆಪಿ (BJP) ಗೆಲ್ಲೋದಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಗೆಲ್ಲಕ್ಕೆ ಅವ್ರು ಕಾರಣ ಅಲ್ವಾ.? ಮೊದಲು ನಾವು ಅಭ್ಯರ್ಥಿಗೆ ಹಾಕಿದ್ದು, ಆ ನಂತರ ಅವ್ರು ಅಭ್ಯರ್ಥಿಗೆ ಹಾಕಿದ್ದು ಎಂದು ಹೇಳಿದ್ರು. ಬಿಜೆಪಿ ಗೆಲ್ಲಬಾರ್ದಿತ್ತು ಅನ್ನೋದಿದ್ರೆ ಅವ್ರು ಕ್ಯಾಂಡಿಡೇಟ್ ಹಾಕಬಾರದಿತ್ತು.
ದೇವೇಗೌಡ್ರು (Devegowda) ನಿಂತಾಗ ನಾವು ಕ್ಯಾಂಡಿಡೇಟ್ ಹಾಕಿದ್ವಾ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅವ್ರು ಮುಖ್ಯಮಂತ್ರಿ ಆಗೋಕೆ ನಾವು ಸಪೋರ್ಟ್ ಮಾಡಿರ್ಲಿಲ್ವ. ನಾವು ಈ ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ವಿ. ಇದೇ ವೇಳೆ ಬಿಜೆಪಿ ಗೆಲ್ಲಬಾರ್ದು ಅನ್ನೊದಾಗಿದ್ರೆ ನಮಗೆ ಸಪೋರ್ಟ್ ಮಾಡಬೇಕಿತ್ತು. ಬಿಜೆಪಿ ಗೆಲ್ಲಕ್ಕೆ ಅವರೇ ಕಾರಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ (Kumarswamy) ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ : – ನಮ್ಮಲ್ಲಿ ಯಾವುದೇ ಬಣನೂ ಇಲ್ಲ ಬಾಣನೂ ಇಲ್ಲ – ಲಕ್ಷ್ಮಣ್ ಸವದಿ ಆಕ್ರೋಶ