Canara Bank- 1,29,000 ಕೋಟಿ ಸಾಲ ವಸೂಲು ಮಾಡಲಾಗದ ಕೆನರಾ ಬ್ಯಾಂಕ್, ಸುಸ್ತಿದಾರರ ಹೆಸರು ಬಹಿರಂಗಪಡಿಸಿಲ್ಲ ಯಾಕೆ..?

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಪ್ರತಿಷ್ಠಿತ ಕೆನರಾ ಬ್ಯಾಂಕ್ (Canara Bank) ಭಾರೀ ಮೊತ್ತದ ಸಾಲ ನೀಡಿ ಎಡವಟ್ಟು ಮಾಡಿಕೊಂಡಿದೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಪ್ರತಿಷ್ಠಿತ ಕೆನರಾ ಬ್ಯಾಂಕ್ (Canara Bank) ಭಾರೀ ಮೊತ್ತದ ಸಾಲ ನೀಡಿ ಎಡವಟ್ಟು ಮಾಡಿಕೊಂಡಿದೆ. ಸುಸ್ತಿದಾರರಿಂದ (ಬಿಗ್ ಡಿಫಾಲ್ಟರ್) ಬರಬೇಕಿದ್ದ 1.29 ಲಕ್ಷ ಕೋಟಿ ರೂ ಕೆಟ್ಟ ಸಾಲಗಳಿಗೆ ತಿಲಾಂಜಲಿ ಹಾಡಿದೆ. ಜೊತೆಗೆ ಅವರ ಹೆಸರುಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ನಿರಾಕರಿಸಿದೆ. ಕೆನರಾ ಬ್ಯಾಂಕ್ ಕಳೆದ 11 ವರ್ಷಗಳಲ್ಲಿ 1.29 ಲಕ್ಷ ಕೋಟಿ ಮೌಲ್ಯದ ಕೆಟ್ಟ ಸಾಲವನ್ನು ಮನ್ನಾ ಮಾಡಿದೆ ಎಂದು ಮಾಹಿತಿ ಹಕ್ಕು ಕಾಯಿದೆಯಡಿ ಬಹಿರಂಗಪಡಿಸಿದೆ. ವಿಶೇಷ ಅಂದ್ರೆ ದೊಡ್ಡ ಸುಸ್ತಿದಾರರ ಹೆಸರನ್ನು ಬಹಿರಂಗಪಡಿಸಲು ಕೆನರಾ ಬ್ಯಾಂಕ್ ನಿರಾಕರಿಸಿದೆ.


ಕಳೆದ 11 ವರ್ಷಗಳಲ್ಲಿ 1.29 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕೆಟ್ಟ ಸಾಲಗಳನ್ನು ವಜಾ ಮಾಡಿದೆ ಎಂದು ಆರ್ಟಿಐ ಪ್ರಶ್ನೆಗೆ ಕೆನರಾ ಬ್ಯಾಂಕ್ ಪ್ರತಿಕ್ರಿಯಿಸಿ, ಸುಮ್ಮನಾಗಿದೆ. RTI ಕಾಯಿದೆಯ ಸೆಕ್ಷನ್ 8(1)(1) ಪ್ರಕಾರ Section 8(1)(j) of the RTI Act, ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಸಾರ್ವಜನಿಕ ಆಸಕ್ತಿಗೆ ನೇರವಾಗಿ ಸಂಬಂಧಿಸದ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವಂತಿಲ್ಲ. ಇದನ್ನೂ ಓದಿ :- ರಾಜಾಹುಲಿ ಭಾಷಣಕ್ಕೆ ಕಾಂಗ್ರೆಸ್ ನವರು ತತ್ತರಿಸಿ ಹೋಗಿದ್ದಾರೆ – ಸಿಎಂ ಬೊಮ್ಮಾಯಿ

“ಮಾಹಿತಿಯು ಸಾಲಗಾರರ ವೈಯಕ್ತಿಕ ಮಾಹಿತಿಯಾಗಿದೆ. ಅದನ್ನು ಬಹಿರಂಗಪಡಿಸುವುದರಿಂದ ಸಂಬಂಧಪಟ್ಟವರ ಗೌಪ್ಯತೆಯ ಮೇಲೆ ಅನಗತ್ಯ ಆಕ್ರಮಣವನ್ನು ಉಂಟುಮಾಡುತ್ತದೆ. ಹಾಗಾಗಿ ಇಂತಹ ಪ್ರಮೇಯ ಉದ್ಭವಿಸುವುದು ಬೇಡವೆಂದು ಇದರಿಂದ ವಿನಾಯಿತಿ ನೀಡಲಾಗಿದೆ ಎಂದು ಪುಣೆ ಮೂಲದ ಆರ್ಟಿಐ ಕಾರ್ಯಕರ್ತ ವಿವೇಕ್ ವೆಲಂಕರ್ ಅವರು ಕಳುಹಿಸಿದ ಅರ್ಜಿಗೆ ನೀಡಿದ ಉತ್ತರದಲ್ಲಿ ಬ್ಯಾಂಕ್ ಹೇಳಿದೆ. ಆರ್ಟಿಐ ಉತ್ತರದ ಪ್ರಕಾರ, ಕೆನರಾ ಬ್ಯಾಂಕ್ FY11-12 ರಿಂದ FY 21-22 ಅವಧಿಯಲ್ಲಿ ಒಟ್ಟು 1,29,088 ಕೋಟಿ ಕೆಟ್ಟ ಸಾಲಗಳನ್ನು ಮನ್ನಾ ಮಾಡಿದೆ.

ಇದನ್ನೂ ಓದಿ :-  ಬಿಜೆಪಿ ಮಾಡಿದಷ್ಟು ಅಭಿವೃದ್ಧಿ ಕೆಲಸವನ್ನ ಸಿದ್ದರಾಮಯ್ಯ ಮಾಡೋದಕ್ಕೆ ಸಾಧ್ಯನಾ..? – ಯಡಿಯೂರಪ್ಪ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!