ಟ್ರಾಕ್ಟರ್ ಗೆ (Tractor) ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಘಟನೆ ಹಾವೇರಿಯ (Haveri) ಜೆಲ್ಲೆಯ ಬ್ಯಾಡಗಿ ತಾಲೂಕು ಕಾಗಿನೆಲೆ ಗ್ರಾಮದ ಬಳಿಯ ಕುಮ್ಮೂರು ಕ್ರಾಸ್ ಬಳಿ ನಡೆದಿದೆ .
ಬಡಮಲ್ಲಿ ತಾಂಡಾದಿಂದ ಮಾಸಣಗಿಗೆ ಟ್ರಾಕ್ಟರ್ ನಲ್ಲಿ ಕೂಲಿ ಕಾರ್ಮಿಕರು ಹೊರಟಿದ್ದರು. ಶುಂಠಿ ಹೊಲದ ಕೆಲಸಕ್ಕೆ 26 ಕೂಲಿ ಕಾರ್ಮಿಕರು ಟ್ರಾಕ್ಟರ್ ನಲ್ಲಿ ಹೊರಟಿದ್ದರು .ಕೂಲಿ ಕಾರ್ಮಿಕರಿದ್ದ ಟ್ರಾಕ್ಟರ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ . ಟ್ರಾಕ್ಟರ್ ಹಿಂಬದಿಗೆ ಟಿಪ್ಪರ್ ವೇಗವಾಗಿ ಬಂದು ಗುದ್ದಿದೆ . 10 ಜನ ಕೂಲಿ ಕಾರ್ಮಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ . ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ . ಇದನ್ನೂ ಓದಿ : – ಕೋಲಾರದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಕಾರ್ಮಿಕರ ಪ್ರತಿಭಟನೆ