ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ಸಂಭವಿಸಿದೆ.
ಚಿಂಚೋಳಿ ತಾಲೂಕಿನ ಈದಲಾಯಿ ಗ್ರಾಮದವರಾದ ಬಸವರಾಜಪ್ಪ ಬೆಳ್ಳೂರು (52), ಭೀಮರಾವ್ ಬೆಳ್ಳೂರು (30), ಸುನೀಲ್ ಶಿವರಾಜ ಪಾಟೀಲ (30) ಹಾಗೂ ಕಾರಿನ ಚಾಲಕ ರೇವಣಸಿದ್ದ ಬಸವರಾಜ ಕೊರಡಂಪಳ್ಳಿ (30) ಮೃತಪಟ್ಟ ದುರ್ದೈವಿಗಳು.
ರಾಜ್ಯದಲ್ಲಿ 14 ದಿನಗಳ ಲಾಕ್ ಡೌನ್ ಘೋಷಿಸಿದ್ದರಿಂದ ತವರಿಗೆ ಮರಳುತ್ತಿದ್ದಾಗ ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.