ಬಳ್ಳಾರಿ : ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಸಮೀಪ ನಡೆದಿದೆ.
ಬಳ್ಳಾರಿ ವಾಣಿಜ್ಯ ತೆರಿಗೆ ನಿರೀಕ್ಷಕ ಬಸವರಾಜ ಭೀಮರಾವ ಬೆಳ್ಳೂರು( 52) ಪುತ್ರ ಭೀಮರಾವ ಬೆಳ್ಳೂರು (30) ಶಿವರಾಜ ಪಾಟೀಲ್(30) ಕಾರು ಚಾಲಕ ಬಸವರಾಜ ಕೊರಡಂಪಳ್ಳಿ ಮೃತಪಟ್ಟ ವ್ಯಕ್ತಿಗಳು ಎಂದು ಗುರುತಿಸಲಾಗಿದೆ
ಲಾಕ್ ಡೌನ್ ಹಿನ್ನೆಲೆಯಲ್ಲಿ ಬಸವರಾಜ ಭೀಮರಾವ್ ಪುತ್ರನನ್ನ ಕರೆತರಲು ಕಾರು ಮೂಲಕ ಬೆಂಗಳೂರು ತೆರಳಿದ್ದರು. ಬೆಂಗಳೂರು ನಿಂದ ವಾಪಾಸ್ ಚಿಂಚೋಳ್ಳಿಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ.
ಇನ್ನೂ ಘಟನೆ ಬಗ್ಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.