ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಮತ್ತು ಪುನೀತ್ ರಾಜ್ ಕುಮಾರ್ ನಟಿಸಿದ್ದ ಲಕ್ಕಿ ಮ್ಯಾನ್ ಸಿನಿಮಾಗಳ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ (SANGEETHA SHRUNGERI) ನಿನ್ನೆಯಷ್ಟೇ ದೈವಕ್ಕೆ ಕೋಲ ನೀಡಿ ಪೂಜೆ ಸಲ್ಲಿಸಿದ್ದಾರೆ.
ಮೊನ್ನೆಯಷ್ಟೇ ನಟಿ ಶ್ರುತಿ ಇದೇ ಕೊರಗಜ್ಜನಿಗೆ ಕೋಲ ನೀಡಿದ್ದರು. ನಟಿ ಪ್ರೇಮಾ ಕೂಡ ದರ್ಶನ ಪಡೆದುಕೊಂಡಿದ್ದರು. ಈಗ ನಿರೂಪಕಿ ಅನುಶ್ರೀ ಜೊತೆ ಕೊರಗಜ್ಜನಿಗೆ ಕೋಲ ಸೇವೆ ಮಾಡಿದ್ದಾರೆ ಸಂಗೀತಾ. ಇದನ್ನು ಓದಿ :- ಸತತ 13ವರ್ಷಗಳ ನಂತರ ಇಂದು ಡಾ.ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ
ಈ ಕುರಿತಂತೆ ತಮ್ಮ ಅನುಭವಗಳನ್ನು ಬರೆದುಕೊಂಡಿರುವ ಸಂಗೀತಾ ನನಗೆ ಕಳೆದೆರಡು ದಿನಗಳಿಂದ ದಿವ್ಯ ಅನುಭವದಲ್ಲಿ ಇದ್ದೇನೆ. ಆ ಭಾವನೆಗಳನ್ನು ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ತುಳುನಾಡು ದೈವ ಕೋಲಕ್ಕೆ ನಾನು ಸಾಕ್ಷಿಯಾಗಿದ್ದೇನೆ ಎನ್ನುವುದು ನನ್ನ ಪುಣ್ಯ. ಇಂಥದ್ದೊಂದು ಸಾನಿಧ್ಯ ಸಿಕ್ಕಿರುವುದಕ್ಕೆ ಕಾರಣ ನಿರ್ದೇಶಕರಾದ ಕಿರಣ್ ರಾಜ್ ಮತ್ತು ಭರತ್ ರಾಜ್ ಕೆ ಯಾದವ್. ಇವರ ಕುಟುಂಬಕ್ಕೆ ಕೃತಜ್ಞೆತೆಗಳು’ ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ :- ಸಿಂಹಪ್ರಿಯಾ ಆರತಕ್ಷತೆ – ಶುಭಾಶಯ ಕೋರಿದ ಸಿನಿಮಾ ರಂಗದ ಕಲಾವಿದರು