‘ಚಿಕನ್ ಕಥಿ ರೋಲ್’ – ಒಮ್ಮೆ ಮನೆಯಲ್ಲಿ ಟ್ರೈ ಮಾಡಿ

ಚಿಕನ್ ಎಂದು ಹೆಸರು ಕೇಳಿದರೆ ನಾನ್ ವೆಜ್ ಪ್ರಿಯರ ಬಾಯಲ್ಲಿ ನೀರು ಬರುತ್ತೆ. ಮಟನ್ ಗಿಂತ ಹೆಚ್ಚು ನಾನ್ ಜ್ ಪ್ರಿಯರು ಚಿಕನ್ ತಿನ್ನುತ್ತಾರೆ. ಅದರಲ್ಲಿಯೂ ಇತ್ತೀಚೆಗೆ ಹೆಚ್ಚು ಫೇಮಸ್ ಆಗಿರುವ ‘ಚಿಕನ್ ಕಥಿ ರೋಲ್’ ಚಿಕ್ಕವರಿಂದ ದೊಡ್ಡವರ ತನಕ ಇಷ್ಟಪಟ್ಟು ತಿನ್ನುತ್ತಾರೆ. ಇಂದು ನೀವು ಮನೆಯಲ್ಲಿ ಹೇಗೆ ‘ಚಿಕನ್ ಕಥಿ ರೋಲ್’ ಮಾಡಬಹುದು ಎಂದು ಹೇಳಿಕೊಡುತ್ತೇವೆ.

ಬೇಕಾಗಿರುವ ವಿಧಾನ :-
ಮೊಸರು – 2 ಟೇಬಲ್ ಸ್ಪೂನ್
ಕಟ್ ಮಾಡಿದ ಶುಂಠಿ – 2 ಟೀಸ್ಪೂನ್
ಕಟ್ ಮಾಡಿದ ಬೆಳ್ಳುಳ್ಳಿ, ಲವಂಗ – 2 ಟೀಸ್ಪೂನ್
ಉಪ್ಪು – 1 ಟೀ ಸ್ಪೂನ್
ಅರಿಶಿನ – ಅರ್ಧ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – 1 ಟೀಸ್ಪೂನ್
ಕಸೂರಿ ಮೆಂತ್ಯ – 1 ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ಬೋನ್ ಲೆಸ್ ಚಿಕನ್- 1 ಕಪ್
ಆಲಿವ್ ಎಣ್ಣೆ – 2 ಟೀಸ್ಪೂನ್
ಕೆಂಪು ಮೆಣಸು – 1 ಟೀಸ್ಪೂನ್
ಕಟ್ ಮಾಡಿದ ಈರುಳ್ಳಿ – 1 ಕಪ್
ಪುದೀನ ಚಟ್ನಿ – 2 ಟೀಸ್ಪೂನ್
ಮೊಟ್ಟೆ – 1 ಇದನ್ನೂ ಓದಿ :-  ನಾಗರ ಪಂಚಮಿಗೆ ವಿಶೇಷವಾದ ಎಳ್ಳುಂಡೆ ಮಾಡುವ ವಿಧಾನ ಇಲ್ಲಿದೆ


ಮಾಡುವ ವಿಧಾನ : –
ಮೊದಲು ದೊಡ್ಡ ಬಾಣಲೆಗೆ ಮೊಸರು, ಕಟ್ ಮಾಡಿದ ಶುಂಠಿ, ಬೆಳ್ಳುಳ್ಳಿ, ಲವಂಗ, ಉಪ್ಪು, ಅರಿಶಿನ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ, ಕಸೂರಿ ಮೆಂತ್ಯ, ತಾಜಾ ನಿಂಬೆ ರಸ ಕೊನೆ ಬೋನ್ಲೆಸ್ ಚಿಕನ್ ಬೆರೆಸಿ ಚೆನ್ನಾಗಿ ಫ್ರೈ ಮಾಡಿ. ಪಕ್ಕಕ್ಕಿಡಿ.
ಕಟ್ ಮಾಡಿದ ಈರುಳ್ಳಿಯನ್ನು ಉಪ್ಪು, ಕೆಂಪು ಮೆಣಸಿನಕಾಯಿ ಮತ್ತು ನಿಂಬೆ ರಸದೊಂದಿಗೆ ಟ್ರೈ ಮಾಡಿ ಮತ್ತು ನಂತರ ಪಕ್ಕಕ್ಕೆ ಇರಿಸಿ. ಮಧ್ಯಮ ಉರಿಯಲ್ಲಿ ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
ಕಟ್ ಮಾಡಿದ ಈರುಳ್ಳಿ, ಮೆಣಸು ಸೇರಿಸಿ ಮತ್ತು 3 ನಿಮಿಷಗಳ ಕಾಲ ಹುರಿಯಿರಿ, ಅವು ಸ್ವಲ್ಪ ಮೃದುವಾಗಲು ಪ್ರಾರಂಭವಾಗುತ್ತವೆ. ನಂತರ ಮಸಾಲೆಯುಕ್ತ ಚಿಕನ್ ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ. ಬಾಣಲೆಯನ್ನು ಮುಚ್ಚಿ 5 ನಿಮಿಷ ಬೇಯಿಸಿ. ಕಟ್ ಮಾಡಿದ ಕೊತ್ತಂಬರಿ ಸೊಪ್ಪನ್ನು ಬೆರೆಸಿ. ಅಂಗಡಿಯಲ್ಲಿ ಸಿಗುವ ಪರಾಠವನ್ನು ತೆಗೆದುಕೊಂಡು ಬಂದು ಅದಕ್ಕೆ ಆಲಿವ್ ಎಣ್ಣೆಯಾಕಿ ತವ ಮೇಲೆ ಬೇಯಿಸಿ. ತಿಳಿ ಕಂದು ಬಣ್ಣ ಬರುವವರೆಗೆ 2 ನಿಮಿಷ ಬೇಯಿಸಿ.
ನಂತರ ಅದರ ಮೇಲೆ ಮೊಟ್ಟೆಯನ್ನು ಹಾಕಿ ಅದನ್ನು ಫ್ರೈ ಮಾಡಿ 30 ಸೆಕೆಂಡುಗಳ ಕಾಲ ಬೇಯಿಸಿ.
ನಂತರ ಅದಕ್ಕೆ ಹಸಿರು ಚಟ್ನಿಯನ್ನು ಹರಡಿ. ಮಧ್ಯದಲ್ಲಿ ಸುಮಾರು ಚಿಕನ್ ಮಿಶ್ರಣವನ್ನು ಹಾಕಿ ಈರುಳ್ಳಿ, ಕೊತ್ತಂಬರಿ, ಟೊಮೆಟೊ ಸಾಸ್ ಹಾಕಿ ಪರಾಠವನ್ನು ರೂಲ್ ಮಾಡಿದರೆ ಚಿಕನ್ ಕಥಿ ರೋಲ್’ ಸವಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ :- ನಾಳೆ ನಾಗರಪಂಚಮಿ ಹಬ್ಬ – ಈ ಹಬ್ಬದ ವಿಶೇಷತೆಯೇನು ಗೊತ್ತಾ…?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!