ಚೀನಾಕ್ಕೆ ಭಾರತದ ಒಂದಿಂಚೂ ಭೂಮಿಯನ್ನು ಕಬಳಿಸಲು ಸಾಧ್ಯವಾಗಿಲ್ಲ – ಅಮಿತ್ ಶಾ

ಭಾರತ ಮತ್ತು ಚೀನಾ ಸೈನಿಕರ ನಡುವಿನ ತವಾಂಗ್ ಘರ್ಷಣೆಯ ಕುರಿತು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಗದ್ದಲ ಸೃಷ್ಟಿಸಿರುವುದನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಖಂಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಯಲ್ಲಿ ಪ್ರತಿಪಕ್ಷಗಳು ಪ್ರಶ್ನೋತ್ತರ ಅವಧಿಗೆ ಅವಕಾಶ ನೀಡಲಿಲ್ಲ.

ಭಾರತ ಮತ್ತು ಚೀನಾ ( INDIA AND CHINA ) ಸೈನಿಕರ ನಡುವಿನ ತವಾಂಗ್ ಘರ್ಷಣೆಯ ಕುರಿತು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಗದ್ದಲ ಸೃಷ್ಟಿಸಿರುವುದನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ( AMITH SHAH ) ಖಂಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಯಲ್ಲಿ ಪ್ರತಿಪಕ್ಷಗಳು ಪ್ರಶ್ನೋತ್ತರ ಅವಧಿಗೆ ಅವಕಾಶ ನೀಡಲಿಲ್ಲ. ಸಂಸತ್ತಿನಲ್ಲಿ ರಕ್ಷಣಾ ಸಚಿವರು ಈ ಕುರಿತು ಹೇಳಿಕೆ ನೀಡುತ್ತಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ, ವಿಪಕ್ಷಗಳು ಗದ್ದಲ ಮೂಡಿಸಿದ್ದು, ವಿಪಕ್ಷಗಳ ನಡವಳಿಕೆಯನ್ನು ನಾನು ಖಂಡಿಸುತ್ತೇನೆಂದು ಹೇಳಿದ್ದಾರೆ.

ರಾಜೀವ್ ಗಾಂಧಿ ಪ್ರತಿಷ್ಠಾನದ FCRA ಉಲ್ಲಂಘನೆಯ ಕುರಿತು ಲೋಕಸಭೆಯಲ್ಲಿ ಪ್ರಶ್ನೆ ಎತ್ತುವುದನ್ನು ತಪ್ಪಿಸಲು ಪ್ರತಿಪಕ್ಷಗಳು ಭಾರತ-ಚೀನಾ ಘರ್ಷಣೆ ವಿಚಾರವನ್ನು ಪ್ರಸ್ತಾಪಿಸಿದವು ಎಂದು ಆರೋಪಿಸಿದರು. ಪ್ರಶ್ನೋತ್ತರ ಅವಧಿಯ ಪಟ್ಟಿಯಲ್ಲಿದ್ದ ಪ್ರಶ್ನೆ ಸಂಖ್ಯೆ 5 ಅನ್ನು ನೋಡಿದ ಕೂಡಲೇ ಕಾಂಗ್ರೆಸ್” ( CONGRESS ) ಗೆ ಆತಂಕ ಶುರುವಾಗಿತ್ತು ಎಂದು ತಿಳಿಸಿದ್ದಾರೆ. ವಿಪಕ್ಷಗಳು ಅವಕಾಶ ನೀಡಿದ್ದರೆ, 2005-2007ರ ಅವಧಿಯಲ್ಲಿ ರಾಜೀವ್ ಗಾಂಧಿ ಫೌಂಡೇಶನ್ ಚೀನಾ ರಾಯಭಾರ ಕಚೇರಿಯಿಂದ 1.35 ಕೋಟಿ ರೂಪಾಯಿ ಅನುದಾನವನ್ನು ಪಡೆದಿದೆ ಎಂದು ಸಂಸತ್ತಿನಲ್ಲಿ ಉತ್ತರ ನೀಡುತ್ತಿದ್ದೆ, ಇದು FCRA ಪ್ರಕಾರ ಸೂಕ್ತವಲ್ಲ. ಅದು FCRA ನಿಯಮದ ಉಲ್ಲಂಘನೆ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ರಿಜಿಸ್ಟ್ರೇಶನ್ ರದ್ದುಪಡಿಸಿದೆ ಎಂದಿದ್ದಾರೆ.  ಇದನ್ನು ಓದಿ : – ಸಿದ್ಧರಾಮಯ್ಯ ಸಾಮಾಜಿಕ ನ್ಯಾಯದ ಹೆಜ್ಜೆ ಇಟ್ಟಿದ್ದಾರೆ ಹೊರತು ಧರ್ಮ ಒಡೆದಿಲ್ಲ – ಮಧು ಬಂಗಾರಪ್ಪ

ಇದೇ ವೇಳೆ ಗಡಿ ಘರ್ಷಣೆ ಕುರಿತು ಮಾತನಾಡಿ, ಚೀನಾಕ್ಕೆ ಭಾರತದ ಒಂದಿಂಚೂ ಭೂಮಿಯನ್ನು ಕಬಳಿಸಲು ಸಾಧ್ಯವಾಗಿಲ್ಲ. ತವಾಂಗ್ ಪ್ರದೇಶದಲ್ಲಿ ಭಾರತೀಯ ಸೈನಿಕರು ಧೈರ್ಯ ಮತ್ತು ಶೌರ್ಯದೊಂದಿಗೆ ತಕ್ಷಣವೇ ಚೀನಾ ಪಡೆಗೆ ತಕ್ಕ ಉತ್ತರ ನೀಡಿ ಹಿಮ್ಮೆಟ್ಟಿಸಿದೆ. ಪ್ರಧಾನಿ ಮೋದಿ ಇರುವವರೆಗೆ ಭಾರತದ ಒಂದಿಂಚೂ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಇದನ್ನು ಓದಿ : – ತವಾಂಗ್ ಸಂಘರ್ಷದಲ್ಲಿ ನಮ್ಮ ಸೈನಿಕರು ಹುತಾತ್ಮರಾಗಿಲ್ಲ, ಗಂಭೀರ ಗಾಯಗಳೂ ಆಗಿಲ್ಲ, ರಾಜನಾಥ್ ಸಿಂಗ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!