ಅನೇಕ ಗ್ರಾಹಕರು (Customers) ತಮ್ಮ ಬಿಲ್ (Bill) ಗಳಲ್ಲಿ ನಮೂದಿಸಲಾದ ನಿಜವಾದ ಮೊತ್ತಕ್ಕಿಂತ ನಾಲ್ಕರಿಂದ ಐದು ಪಟ್ಟು ಹೆಚ್ಚಿನ ಮೊತ್ತವನ್ನು ಆನ್ ಲೈನ್ ಮೂಲಕ ಪಾವತಿಸಬೇಕಾಗಿ ಬಂದಿದೆ. ಆನ್ ಲೈನ್ ಮೂಲಕ ಬಿಲ್ ಪಾವತಿ ಮಾಡುವುದರ ಬದಲಾಗಿ ಖುದ್ದಾಗಿ ಹೋಗಿ ಶುಲ್ಕ ಪಾವತಿ ಮಾಡುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ನಾಗರಿಕರಿಗೆ ತಿಳಿಸಿದೆ.
ಅನೇಕ ಗ್ರಾಹಕರ ವಿದ್ಯುತ್ ಬಿಲ್ ಗಳಲ್ಲಿ ತಾಂತ್ರಿಕ ದೋಷಗಳು ಕಂಡುಬಂದು ಇ-ಪಾವತಿಗಳನ್ನು ಮಾಡುವಾಗ ಅವರ ಬಿಲ್ ಗಳಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಬೇಕಾಗಿ ಬಂದಿದೆ. ಇದು ನಾಗರಿಕರಲ್ಲಿ ಗೊಂದಲ ಸೃಷ್ಟಿಸಿತು. ಬೆಸ್ಕಾಂ ಇ-ಪಾವತಿ ಸೇರಿದಂತೆ ಬಹು ಇ-ಪಾವತಿ ಪೋರ್ಟಲ್ ಗಳಲ್ಲಿ ಮೊತ್ತದಲ್ಲಿ ವ್ಯತ್ಯಾಸ ಕಂಡುಬಂದಿದೆ. ಮನೆಗೆ ಬಂದ ಮುದ್ರಿತ ಬೆಸ್ಕಾಂ ಬಿಲ್ 1,800 ರೂಪಾಯಿಗಳಾಗಿದ್ದವು. ಆದರೆ ನಾನು ಅದನ್ನು ಆನ್ ಲೈನ್ ನಲ್ಲಿ ಪಾವತಿಸಲು ಪ್ರಯತ್ನಿಸಿದಾಗ 5,400 ರೂಪಾಯಿಗಳಾಗಿದ್ದವು. ನಾನು ಇದುವರೆಗೆ ಶುಲ್ಕ ಪಾವತಿಯಲ್ಲಿ ಬಾಕಿ ಉಳಿಸಿಕೊಂಡಿರಲಿಲ್ಲ ಎಂದಿದ್ದಾರೆ. ನಿಜವಾದ ಮೊತ್ತವನ್ನು ಪಾವತಿಸಲು ಪ್ರಯತ್ನಿಸಿದಾಗ ಸಾಧ್ಯವಾಗಲಿಲ್ಲ. ಸಹಾಯಕ್ಕಾಗಿ ಬೆಸ್ಕಾಂ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ, ಆದರೆ ಯಾರೂ ಸಿಗುತ್ತಿಲ್ಲ ಎಂದು ಗ್ರಾಹಕರು ಹೇಳಿದ್ದಾರೆ. ಆನ್ ಲೈನ್ ಬಿಲ್ ಜನರೇಟ್ ಮಾಡಲಾದ ಮ್ಯಾನ್ಯುವಲ್ ಬಿಲ್ ಗಿಂತ ಹೆಚ್ಚಿರುವುದನ್ನು ಕಂಡು ಹಿಡಿದ ಇನ್ನೊಬ್ಬ ಗ್ರಾಹಕರ ಸ್ಥಿತಿಯೂ ಇದೇ ಈಗಿದೆ. ಅವರ ಮ್ಯಾನ್ಯುವಲ್ ಬಿಲ್ 1,900 ರೂಪಾಯಿಗಳು ಆದರೆ ಆನ್ಲೈನ್ ಬಿಲ್ 6,000 ರೂಪಾಯಿ ತೋರಿಸುತ್ತಿದೆ.
ಇದನ್ನೂ ಓದಿ : – ‘ವಂದೇ ಭಾರತ್ ಪರಿಷ್ಕೃತ ಟಿಕೆಟ್ ದರ , ಟಿಕೆಟ್ ಬುಕ್ಕಿಂಗ್ ಕುರಿತು ಇಲ್ಲಿದೆ ಮಾಹಿತಿ