ರಾಜ್ಯದ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಯಾದಗಿರಿಯ ದೇವತ್ಕಲ್ ನಲ್ಲಿ ಮಾತನಾಡಿದ ಸಿಎಂ ನಿನ್ನೆ ತಾನೇ ಈ ಕುರಿತು ಗುಜರಾತ್ ನಲ್ಲಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದ್ದಾರೆ. ಈ ಕುರಿತು ನಮ್ಮ ಸಚಿವರು ಚರ್ಚೆ ನಡೆಸುತ್ತಿದ್ದಾರೆ. ಶಿಕ್ಷಣ ಇಲಾಖೆಯವರು ವಿವರ ಪಡೆದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ, ಮಕ್ಕಳ ಶಿಕ್ಷಣ ನೈತಿಕತೆ ಕೊಡಬೇಕೆಂದು ನಿಟ್ಟಿನಲ್ಲಿ ಭಗವದ್ಗೀತೆ ಅಳವಡಿಕೆ ಮಾಡುವುದು ನಮ್ಮ ಧ್ಯೆಯವಾಗಿದೆ ಎಂದು ಸಿಎಂ ಹೇಳಿದ್ದಾರೆ.
0 96 Less than a minute