ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಇಂದು 47ನೇ ಹುಟ್ಟುಹಬ್ಬವಾಗಿದ್ದು, ಈ ವಿಶೇಷ ದಿನದಂದು ಅಪ್ಪುವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಕೋರಿದ್ದಾರೆ. ಅಪ್ಪು ಎಲ್ಲರನ್ನು ಅಗಲಿ ನಾಲ್ಕೂವರೆ ತಿಂಗಳಾಗುತ್ತಾ ಬಂದರೂ, ಪುನೀತ್ ನೆನಪು ಮಾತ್ರ ಎಲ್ಲರ ಮನದಲ್ಲಿ ಅಜರಾಮರವಾಗಿದೆ. ಇಂದು ಅಪ್ಪು ಹುಟ್ಟುಹಬ್ಬವನ್ನು ರಾಜ್ಯದೆಲ್ಲೆಡೆ ಅಭಿಮಾನಿಗಳು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.
ಅವರ ಆದರ್ಶದ ಬದುಕು, ಸಾರ್ವಜನಿಕ ಸೇವೆ, ನಡೆದುಕೊಂಡ ರೀತಿ,ಬಡವರಿಗೆ ಸಹಾಯ ಮಾಡಿದ ರೀತಿ, ಅಂಗಾಂಗಗಳ ದಾನ ಮಾಡಿರೋದು ಇವೆಲ್ಲ ನಮಗೆ ಆದರ್ಶ ಮತ್ತು ಪ್ರೇರಣೆಯಾಗಿದೆ. ಅವರ ಸಿನಿಮಾ ಜೇಮ್ಸ್ ಬಿಡುಗಡೆಯಾಗಿದೆ. ಸಿನಿಮಾಗೆ ಶುಭಾಶಯಗಳು ಕೋರುತ್ತೇನೆ. ಪುನೀತ್ ಅವರಿಗೆ ಕರ್ನಾಟಕ ರತ್ನ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ. ಆದಷ್ಟು ಬೇಗ ಕುಟುಂಬ ಸದಸ್ಯರು ಜೊತೆ ಮಾತನಾಡಿ ಒಂದು ದಿನಾಂಕ ನಿಗದಿ ಮಾಡಿ ಆ ಕಾರ್ಯಕ್ರಮ ಯಾವ ರೀತಿ ಆಗಬೇಕು ಎಂದು ತೀರ್ಮಾನಿಸಲಾಗುವುದು ಎಂದು ಹೇಳಿದ್ರು.