ಬಿಡಿಎ (BDA ) ಮಂಜೂರು ಮಾಡಿರುವ ನಿವೇಶನವನ್ನು ಮುಖ್ಯಮಂತ್ರಿ ಬೊಮ್ಮಾಯಿ ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೆ ಹಸ್ತಾಂತರಿಸಿದರು. ಕೆಲ ದಿನಗಳ ಹಿಂದಷ್ಟೇ ತಿಮ್ಮಕ್ಕ ಸಿಎಂ ಅವರನ್ನು ಭೇಟಿ ಮಾಡಿದ್ದರು. ಸಿಎಂ ಸೂಚನೆ ಮೇರೆಗೆ ನಿವೇಶನ ಹಂಚಿಕೆ ಪತ್ರವನ್ನು ತಿಮ್ಮಕ್ಕನಿಗೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬೊಮ್ಮಾಯಿ (BASAVARAJ BOMMAI) ಸಾಲುಮರದ ತಿಮ್ಮಕ್ಕನಿಗೆ ನಿವೇಶನ ಕ್ರಯ ಪತ್ರವನ್ನು ಹಸ್ತಾಂತರಿಸಿದ್ದಾರೆ. ಇಂದು ಮುಂಜಾನೆ ರೇಸ್ ಕೋರ್ಸ್ (RACE COURSE ) ನಿವಾಸದಲ್ಲಿ ಸಾಲುಮರದ ತಿಮ್ಮಕ್ಕ ಹಾಗೂ ಆಕೆಯ ಸಾಕು ಪುತ್ರನಿಗೆ ಸಿಎಂ ಕರಾರು ಪತ್ರ ನೀಡಿದರು. ನಾಡಪ್ರಭು ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್ ಜೆ ಸೆಕ್ಟರ್ನಲ್ಲಿ ನಿವೇಶನ ಹಂಚಿಕೆ ಆಗಿದ್ದು, ಒಟ್ಟು 50*80 ಚದರ ಅಡಿಯ ನಿವೇಶನ ನೀಡಿದೆ.
ಇದನ್ನೂ ಓದಿ : – ಮೋದಿ ವಿಷಕಂಠನಂತೆ 19 ವರ್ಷ ಮೌನವಾಗಿ ನೋವು ನುಂಗಿದ್ದಾರೆ – ಅಮಿತ್ ಶಾ…!