ಮಾಜಿ ಸಿಎಂ ಎಸ್.ಎಂ.ಕೃಷ್ಣಗೆ ಪದ್ಮವಿಭೂಷಣ ಘೋಷಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ನಿವಾಸಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಸಿಎಂಗೆ ಸಚಿವ ಆರ್.ಅಶೋಕ್ (R.ASHOK) ಸಾಥ್ ನೀಡಿದ್ದಾರೆ.
ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿರುವ ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ ಶ್ರೀ ಎಸ್.ಎಂ.ಕೃಷ್ಣರವರ ನಿವಾಸಕ್ಕೆ ಭೇಟಿ ನೀಡಿ, ರಾಜ್ಯದ ಸಮಸ್ತ ಜನತೆಯ ಪರವಾಗಿ ಅವರನ್ನು ಅಭಿನಂದಿಸಿದೆ. ಶ್ರೀಯುತರಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿರುವುದು ನಾಡಿಗೆ ಹೆಮ್ಮೆಯ ವಿಚಾರವಾಗಿದೆ. pic.twitter.com/ciCStLrbhT
— Basavaraj S Bommai (@BSBommai) January 27, 2023
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ (BASAVARAJ BOMMAI) ಎಸ್.ಎಂ.ಕೆ ಕರ್ನಾಟಕದ ಹೆಮ್ಮೆ .ನಾಡು ಕಂಡ ಸೃಜನಶೀಲ ಸರಳ ಸಜ್ಜನಿಕೆಯ ರಾಜಕಾರಣಿ. ಉತ್ತಮ ಆಡಳಿತಕ್ಕೆ ಹೆಸರಾದವರು.ಎಸ್ ಎಂಕೆ ಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದ್ದು ಸಂತೋಷ ತಂದಿದೆ. ಅವರ ಆಡಳಿತದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನ ನೀಡಿದ್ದಾರೆ. ರೈತರಿಗಾಗಿ ಯಶಸ್ವಿನಿ ಯೋಜನೆ ಮತ್ತು ಮಧ್ಯಾಹ್ನದ ಬಿಸಿಊಟ ಯೋಜನೆಗಳನ್ನ ಮರೆಯೋಕೆ ಸಾಧ್ಯವಿಲ್ಲ. ಕಾವೇರಿ ಕೃಷ್ಣ ವಿಚಾರದಲ್ಲಿ ಅವರು ತಗೆದುಕೊಂಡ ನಿರ್ಧಾರ ಹಾಗೂ ರಾಜ್ಯದಲ್ಲಿ IT – BT ಬೆಳಸಿದ್ದು ಅವರು. ನರೇಂದ್ರ ಮೋದಿಯವರು ಎಸ್ ಎಂಕೆ ಕಾರ್ಯವೈಖರಿಯನ್ನ ಗುರುತಿಸಿ ಪದ್ಮವಿಭೂಷಣ ಪ್ರಶಸ್ತಿ ನೀಡಿದ್ದಾರೆ. ಸಮಸ್ತ ರಾಜ್ಯ ಜನತೆಯ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಮಾಜಿ ಸಿಎಂ ಎಸ್.ಎಂ.ಕೃಷ್ಣ (S.M KRISHNA) ಮಾತನಾಡಿ, ನನ್ನ ಯೋಗ್ಯತೆಗೂ ಮೀರಿದ ದೊಡ್ಡ ಗೌರವವನ್ನು ಪ್ರಧಾನಿ ಹಾಗೂ ಅಮಿತ್ ಶಾ ಅವರು ನನಗಾಗಿ ಮಾಡಿಕೊಟ್ಟಿದ್ದಾರೆ. ಇದು ಬಯಸದೆ ಬಂದ ಭಾಗ್ಯವಾಗಿದೆ. ನಾನು ಇದನ್ನು ಕನಸ್ಸು ಮನಸ್ಸಿನಲ್ಲೂ ನಿರೀಕ್ಷೆ ಮಾಡಿರಲಿಲ್ಲ. ಪದ್ಮ ಪ್ರಶಸ್ತಿ ಕೊಡುವ ನಿರ್ಧಾರ ವನ್ನು ಕೇಂದ್ರ ಸರ್ಕಾರ ಮಾಡಿದೆ. ಅದಕ್ಕಾಗಿ ನಾನು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬಿಸಿಯೂಟ ಮತ್ತೆ ಯಶಸ್ವಿನಿ ನನ್ನ ಹೃದಯದ ಹತ್ತಿರ ಇರುವ ಯೋಜನೆ. ರಾಜ್ಯ ಸರ್ಕಾರ ನನ್ನ ಬಗ್ಗೆ ಬಹಳ ಒಳ್ಳೆಯ ರೀತಿಯಲ್ಲಿಯೇ ನಡೆಸಿಕೊಂಡು ಬಂದಿದೆ. ಮೊದಲು ಕೆಂಪೇಗೌಡ ಪ್ರಶಸ್ತಿ, ಆ ನಂತರ ಪದ್ಮ ವಿಭೂಷಣ ಪ್ರಶಸ್ತಿ ಬಂದಿದೆ. ಇವೆಲ್ಲವೂ ಕೂಡ ನನಗೆ ದೊಡ್ಡ ಪ್ರಶಸ್ತಿಗಳು ಅದಕ್ಕಾಗಿ ನಾನು ಸಿಎಂ ಸೇರಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ರು.
ಇದನ್ನು ಓದಿ :-ವಿಧಾನಸೌಧದಲ್ಲಿ 10 ಲಕ್ಷ ಹಣ ಸಿಕ್ಕ ಪ್ರಕರಣ -ತನಿಖೆ ವೇಳೆ ಮತ್ತೊಂದು ಟ್ವಿಸ್ಟ್