“ರಾಜ್ಯದಲ್ಲಿ ಹಲಾಲ್ ವಿರೋಧಿ ಅಭಿಯಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದಕ್ಕೆ ಪ್ರತಿಕ್ರಿಯೆ ಕೊಡಬೇಕೋ ಅದಕ್ಕೆ ಕೊಡುತ್ತೇವೆ. ಯಾವುದಕ್ಕೆ ಪ್ರತಿಕ್ರಿಯೆ ಕೊಡಬೇಕು, ಕೊಡಬಾರದು ಅಂತ ಗೊತ್ತಿದೆ” ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, “ಹಲಾಲ್ ವಿರುದ್ಧ ಅಭಿಯಾನ ವಿಚಾರವಾಗಿ ನಮ್ಮ ಸರ್ಕಾರದ ನಿಲುವು ಏನು ಅಂತ ಮುಂದೆ ತಿಳಿಸುತ್ತೇವೆ. ಹಲವಾರು ಸಂಘಟನೆಗಳು ಬ್ಯಾನ್ ಮಾಡ್ತಾನೆ ಇರ್ತಾವೆ. ಯಾವಾಗ ಏನು ಹೇಳಬೇಕೋ ಆಗ ಹೇಳ್ತೀವಿ” ಎಂದು ತಿಳಿಸಿದ್ದಾರೆ.
ಇದನ್ನು ಓದಿ :-ಗದಗದಲ್ಲಿ ಹಿಜಾಬ್ ಧರಿಸಿ ಪರೀಕ್ಷೆಗೆ ಅವಕಾಶ – 7 ಮಂದಿ ಅಮಾನತು
“ಸಾಹಿತಿಗಳ ಪತ್ರದ ಅಂಶಗಳನ್ನು ಅಧ್ಯಯನ ಮಾಡಿ ಮಾಡಿ ಯಾವ ವಿಚಾರದ ಬಗ್ಗೆ ಏನು ಹೇಳಿದ್ದಾರೆ, ವಾಸ್ತವ ಅಂಶ ಏನಿದೆ? ಹಾಗೂ ಅವರು ಹೇಳಿರುವ ವಿಚಾರವನ್ನು ಪರಿಗಣಿಸಿ ಅವರು ಎತ್ತಿರುವ ವಿಚಾರಗಳನ್ನು ಯಾವ ರೀತಿ ನಿಭಾಯಿಸಬೇಕು ಎಂದು ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಇದೀಗ ಹಲಾಲ್ ರಾಜಕೀಯ ನಡೆಯುತ್ತಿದೆ. ಕೆಲ ರಾಜಕೀಯ ಮುಖಂಡರು ಹಲಾಲ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಹಲಾಲ್ ಮಾಂಸ ಖರೀದಿಸದಂತೆ ಹಿಂದೂ ಸಮುದಾಯರವರಿಗೆ ಹಿಂದೂ ಸಂಘಟನೆಗಳು ಮನವಿ ಮಾಡಿದ್ದಾರೆ.
ಇದನ್ನು ಓದಿ :- ಹಲಾಲ್ VS ಜಟ್ಕಾ ಕಟ್ – ಯುಗಾದಿಗೆ ಮೊದಲು ಭುಗಿಲೆದ್ದ ಮತ್ತೊಂದು ವಿವಾದ