ಅಮಿತ್ ಶಾ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ವ್ಯಂಗ್ಯವಾಗಿ ಸರಣಿ ಟ್ವೀಟ್ ಮಾಡಿದೆ. ಸಿಎಂ ಬದಲಾವಣೆ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಅವರ ಮುನ್ಸೂಚನೆ ನಿಜವೇ ಎಂದು ಪ್ರಶ್ನಿಸಿದೆ.
ನಿಜವಲ್ಲ ಎಂದಾದರೆ, ಇತರ ಪಕ್ಷಗಳ ನಾಯಕರಿಗೆ ನೋಟಿಸ್ ಸಲಹೆ ಕೊಡುವ ತಾವು ಯತ್ನಾಳ್ ಅವರಿಗೆ ನೋಟಿಸ್ ಏಕೆ ನೀಡಿಲ್ಲ? ಕೇಳಿದೆ. ಬಿಜೆಪಿ ನಾಯಕತ್ವವಿಲ್ಲದೆ ಒದ್ದಾಡುವ ಸ್ಥಿತಿ ಬಂದಿದೆ, ಅದೆಷ್ಟೇ ಬದಲಾವಣೆಯ ಸರ್ಕಸ್ ಮಾಡಿದರೂ ನಾಯಕತ್ವ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದೇ ವೇಳೆ ಅಮಿತ್ ಷಾ ಗೆ ಪಂಚ ಪ್ರಶ್ನೆ ಕೇಳಿ ಕಾಂಗ್ರೆಸ್ ಟ್ವೀಟ್ ಮಾಡಿದೆ. ಅಮಿದ್ ಷಾ ಅವರೇ, ನಿಮ್ಮ ಕರ್ನಾಟಕದ ಭೇಟಿಯ ಅಜೆಂಡಾ ಏನು? PSI ಪರೀಕ್ಷೆ ಅಕ್ರಮವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸುವುದೇ?
ಬಿಟ್ ಕಾಯಿನ್ ಹಗರಣದ ತನಿಖೆಯನ್ನ ಚುರುಕುಗೊಳಿಸುವುದಕ್ಕಾ? ಕುಸಿದು ಕುಳಿತಿರುವ ರಾಜ್ಯದ ಕಾನೂನು ಸುವ್ಯವಸ್ಥೆಯನ್ನ ಸರಿಪಡಿಸುವುದಕ್ಕಾ? ಅಸಮರ್ಥ ಗೃಹಮಂತ್ರಿಯನ್ನು ಬದಲಿಸುವುದಕ್ಕಾ? ಅಥವಾ ಸಿಎಂ ಬದಲಾವಣೆಗಾ? ಎಂದು ಪಂಚ ಪ್ರಶ್ನೆಗಳನ್ನ ಕೇಳಿದೆ. ಕೇಂದ್ರ ಗೃಹಸಚಿವರ ರಾಜ್ಯದ ಭೇಟಿ ಕೆಟ್ಟು ನಿಂತ ಡಬಲ್ ಇಂಜಿನ್ ಸರ್ಕಾರವನ್ನು ತಳ್ಳಿ ಸ್ಟಾರ್ಟ್ ಮಾಡುವುದಕ್ಕಲ್ಲ, ಬದಲಾಗಿ ಜೆ.ಪಿ ನಡ್ಡಾ ಅವರನ್ನು ಸೈಡ್ ಲೈನ್ ಮಾಡುವುದಕ್ಕೆ ಎಂದು ವ್ಯಂಗ್ಯವಾಡಿದೆ.
ಇದನ್ನೂ ಓದಿ :- ಮಾಜಿ ಪತ್ನಿಯನ್ನೇ ಮತ್ತೊಮ್ಮೆ ಮದ್ವೆ ಆಗ್ತೀನಿ ಎಂದ ಬಿಲ್ ಗೇಟ್ಸ್