ಸಿಎಂ ಮನೆ ಮುಂದೆ ವೃದ್ದನೊಬ್ಬ ಬಾಟಲಿಯಲ್ಲಿ ವಿಷ ಸೇವಿಸಲು ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೊಲೀಸರು ಕೆಲವರ ಜೊತೆ ಸೇರಿ ಸೈಟ್ ಮಾರಾಟದಲ್ಲಿ ಮೋಸ ಮಾಡಿದ್ದಾರೆ ಎಂದು ಅನ್ನಪೊರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಸುಂಕದಕಟ್ಟೆಯ ಚಂದ್ರಶೇಖರ್ ಸಿಎಂಗೆ ದೂರು ನೀಡಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ವಿಷದ ಬಾಟಲಿ ತೆಗೆದು ಸಿಎಂಗೆ ತೋರಿಸಿ ಕುಡಿಯಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ತಡೆದಿದ್ದಾರೆ. ವೃದ್ಧನನ್ನು ಸ್ವಲ್ಪ ದೂರಕ್ಕೆ ಕರೆದೊಯ್ದು ವಿಚಾರಣೆ ನಡೆಸಿ ಮಾಹಿತಿ ಪಡೆದ ಪೊಲೀಸರು ಸೈಟ್ ಮಾರಾಟದಲ್ಲಿ ಲಕ್ಷಾಂತರ ರೂ ಮೋಸ ಆಗಿದೆ ಎಂದು ತಿಳಿಸಿದ್ದಾರೆ.
0 67 Less than a minute