161 ಅಡಿ ಎತ್ತರದ ಪಂಚಮುಖಿ ಆಂಜನೇಯ ವಿಗ್ರಹವನ್ನು ಕುಣಿಗಲ್ ಹೊರವಲಯದ ಬಿದನಗೆರೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಉಧ್ಘಾಟಿಸಿದರು.ವಿಶ್ವದಲ್ಲೇ ಅತಿ ಎತ್ತರದ 161 ಅಡಿಯ ಪಂಚಮುಖಿ ಆಂಜನೇಯ ವಿಗ್ರಹ ಇದಾಗಿದೆ.
ಈ ಕಾರ್ಯಕ್ರಮಕ್ಕೆ ಸಚಿವ ಅಶ್ವಥ್ ನಾರಾಯಣ್, ಕೋಲಾರ ಸಂಸದ ಮುನಿಸ್ವಾಮಿ, ತಾರಾ ಅನುರಾಧ, ಶಾಸಕ ಡಾ.ರಂಗನಾಥ್,ರಾಜು ಗೌಡ, ಮಾಜಿ ಸಂಸದ ಮುದ್ದಹನುಮೇಗೌಡ ಸೇರಿ ಅನೇಕರು ಭಾಗಿಯಾಗಿದ್ದರು.
ಇದನ್ನು ಓದಿ : – ಚಂದ್ರು ಕೊಲೆ ಪ್ರಕರಣ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ – ಅರಗ ಜ್ಞಾನೇಂದ್ರ
ಉಧ್ಘಾಟನೆ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ ವರ್ಚುಲ್ ಇನೋಗ್ರಾಶನ್ ಮೂಲಕ ಪ್ರಧಾನಿ ಮೋದಿ ಅವರು ಉದ್ಘಾಟನಾ ಮಾಡಲು ಮನವಿ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಆಗಿಲ್ಲ ಎಂದು ತಿಳಿಸಿದ್ರು.
ತೈಲ ಬೆಲೆ ಇಳಿಕೆ ಮಾಡೋ ವಿಚಾರ
ತೈಲ ಬೆಲೆಯನ್ನು ನಾವೊಬ್ಬರೇ ಇಳಿಕೆ ಮಾಡೋಕೆ ಆಗಲ್ಲ.ಕಳೆದ ಬಾರಿ 7 ರೂಪಾಯಿ ಇಳಿಕೆ ಮಾಡಿದ್ವಿ.ಅಂತರಾಷ್ಟ್ರೀಯ ತೈಲ ದರದ ಏರಿಕೆ ಮೇಲೆ ಇಲ್ಲಿ ಬೆಲೆ ಏರಿಕೆಯಾಗಿದೆ. ಬರುವಂತಹ ದಿನಗಳಲ್ಲಿ ಇಳಿಕೆ ಮಾಡುವ ಬಗ್ಗೆ ಯೋಚನೆ ಮಾಡ್ತಿವಿ ಎಂದು ಹೇಳಿದ್ರು.
ಕಾಂಗ್ರೆಸ್ ಕೇಸರಿ ಶಾಲು ಧರಿಸಿ ರಾಮನವಮಿ ವಿಚಾರ
ಕಾಂಗ್ರೆಸ್ ಕೇಸರಿ ಶಾಲು ಧರಿಸಿ ರಾಮನವಮಿ ಆಚರಣೆ ಮಾಡಿರೋದು ಒಳ್ಳೆಯದು. ಅದು ಪರಿವರ್ತನೆಯ ಸಂಕೇತ. ಶ್ರೀರಾಮ ಚಂದ್ರನೇ ಈ ಜಗತ್ತನ್ನ ನಡೆಸ್ತಿರೋದು. ಅವರು ಪರಿವರ್ತನೆ ಆದ್ರೆ ಎಲ್ಲದು ಒಳ್ಳೆಯದು. ಅವರು ಶ್ರೀರಾಮನಿಂದಲೇ ಪರಿವರ್ತನೆ ಆಗಿದ್ದಾರೆ ಎಂದು ಹೇಳಿದ್ರು.
ಇದನ್ನು ಓದಿ : – ಆಂಜನೇಯನ ದೇಗುಲಗಳಲ್ಲಿ ಇಂದು ರಾಮನ ಆರಾಧನೆ