ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ಬಂದಿದೆ. ಪುರುಷರ 67 ಕೆಜಿ ವೇಟ್ ಲಿಫ್ಟಿಂಗ್ ಫೈನಲ್ ನಲ್ಲಿ ಭಾರತದ ವೇಟ್ ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ (Jeremy Lalrinnunga )ಚಿನ್ನದ ಪದಕ ಗೆದ್ದಿದ್ದಾರೆ.
ಭಾರತದ 16 ವರ್ಷದ ಯೂಥ್ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಜೆರೆಮಿ ಲಾಲ್ರಿನ್ನುಂಗಾ ಅವರು ಹೊಸ ಯುವ ವಿಶ್ವದಾಖಲೆ ನಿರ್ಮಿಸಿದರು. ಚೀನಾದ ಶಾಂಘೈ ನಗರ ಸಮೀಪದ ನಿಂಗ್ಬೋ ನಗರದಲ್ಲಿ ನಡೆಯುತ್ತಿರುವ ಏಷ್ಯನ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಪುರುಷರ 67 ಕಿಲೋ ವಿಭಾಗದಲ್ಲಿ ಜೆರೆಮಿ ಅವರು ಸ್ನ್ಯಾಚ್ ಮತ್ತು ಕ್ಲೀನ್ ಅಂಡ್ ಜೆರ್ಕ್ ಸೇರಿ ಒಟ್ಟು 297 ಕಿಲೋ ತೂಕ ಎತ್ತಿ ಹೊಸ ದಾಖಲೆ ಬರೆದರು.
16 ವರ್ಷದ ಭಾರತದ ಪ್ರತಿಭೆಯು ತನ್ನ ಮೂರು ಯತ್ನಗಳಲ್ಲಿ ಸ್ನ್ಯಾಚ್ ನಲ್ಲಿ 134 ಕಿಲೋ ಹಾಗೂ ಕ್ಲೀನ್ ಅಂಡ್ ಜೆರ್ಕ್ ನಲ್ಲಿ 163 ಕಿಲೋ ಎತ್ತುವಲ್ಲಿ ಸಫಲರಾದರು. ಸ್ನ್ಯಾಚ್ ನಲ್ಲಿ ಅವರು 130 ಮತ್ತು 134 ಕಿಲೋ ಎತ್ತಿದರೆ, ಕ್ಲೀನ್ ಅಂಡ್ ಜೆರ್ಕ್ ನಲ್ಲಿ 157 ಮತ್ತು 163 ಕಿಲೋ ಭಾರ ಎತ್ತಿದರು. ಸ್ನ್ಯಾಚ್ ನಲ್ಲಿ ಅವರು ಯುವ ವಿಶ್ವ ಹಾಗೂ ಯುವ ಏಷ್ಯನ್ ವೇಟ್ ಲಿಫ್ಟಿಂಗ್ ದಾಖಲೆ ಮುರಿದರು. ಕ್ಲೀನ್ ಅಂಡ್ ಜೆರ್ಕ್ ನಲ್ಲೂ ಅವರು ಕಜಕಸ್ತಾನದ ಸೈಖಾನ್ ತೈಸುಯೆವ್ ಅವರ ಹೆಸರಿನಲ್ಲಿದ್ದ ಯುವ ವಿಶ್ವ ದಾಖಲೆಯನ್ನು ಮುರಿದರು.
ಇದನ್ನು ಓದಿ :- ಕಾಮನ್ ವೆಲ್ತ್ ನಲ್ಲಿ ಬೆಳ್ಳಿ ಗೆದ್ದ ಸಂಕೇತ್ ಸರ್ಗರ್ ಗೆ ಮಹಾರಾಷ್ಟ್ರ ಸರ್ಕಾರದಿಂದ ಬಂಪರ್ ಬಹುಮಾನ ಘೋಷಣೆ