ಮನುಷ್ಯರು ತೊಂದರೆ ಕೊಡುತ್ತಿದ್ದರೇ ದೂರು ಕೊಡುವುದನ್ನು ನೋಡಿದ್ದೇವೆ ಆದರೆ ಎಮ್ಮೆ (BUFFALO) ಗಳು ತೊಂದರೆ ಕೊಡುತ್ತಿವೆ ಎಂದು ಬೆಂಗಳೂರಿ (BANGALORE) ನ ಎಮ್ಮೆಗಳ ವಿರುದ್ಧ ಟೆಕ್ಕಿಗಳು ದೂರು ನೀಡಿದ್ದಾರೆ.
ಐಟಿ-ಬಿಟಿ ಕಂಪನಿ (IT BT COMPANY) ಉದ್ಯೋಗಿಗಳು ಬೆಳಿಗ್ಗೆ ಆಫೀಸ್ ಗೆ ಹೋಗುವಾಗ ನಗರದ ಕಸವನಹಳ್ಳಿ ರೋಡ್ ನಲ್ಲಿ ಪ್ರತಿನಿತ್ಯ ಎಮ್ಮೆಗಳು ಸರತಿ ಸಾಲಿನಲ್ಲಿ ಮಾರ್ಚ್ ಫಾಸ್ಟ್ ಮಾಡುತ್ತಾ ರೋಡ್ ನಲ್ಲಿ ಹೋಗುತ್ತಿವೆ. ಇದರಿಂದ ದಿನನಿತ್ಯ 45 ನಿಮಿಷ ಟ್ರಾಫಿಕ್ ಜಾಮ್ ಆಗುತ್ತಿದ್ದು, ಟೆಕ್ಕಿಗಳು ಹೈರಾಣಾಗಿ ಹೋಗಿದ್ದಾರೆ. ಈ ಹಿನ್ನೆಲೆ MNC ಟೆಕ್ಕಿಗಳು ಕಳೆದ 6-7 ತಿಂಗಳಿಂದ ಎಮ್ಮೆಗಳಿಂದ ಟ್ರಾಫಿಕ್ ಜಾಮ್ ಆಗಿ ಆಫೀಸ್ ಗೆ ನಿತ್ಯ ತಡವಾಗುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಿ ಅಂತ ಟೀಟ್ವರ್ನಲ್ಲಿ ಪಶುಸಂಗೋಪನಾ ಇಲಾಖೆ, ಟ್ರಾಫಿಕ್ ಪೋಲಿಸ್, ಬಿಬಿಎಂಪಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
ಇದನ್ನು ಓದಿ :- ಕರ್ನಾಟಕ ರಾಜ್ಯದ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ