SC,ST ಮೀಸಲಾತಿ ಹೆಚ್ಚಳದ ನಿರ್ಧಾರಕ್ಕೆ ಸ್ವಾಗತ. ಸಿಎಂ ಕೈಗೊಂಡ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ( K. SUDHAKAR ) ಹೇಳಿದ್ದಾರೆ. ನ್ಯಾಯಸಮ್ಮತ ಬೇಡಿಕೆಯನ್ನು ಸಿಎಂ ಈಡೇರಿಸಿದ್ದಾರೆ. ಮೀಸಲಾತಿ ಸಾಮಾಜಿಕ ಕಳಕಳಿ ಬಗ್ಗೆ ಸರ್ಕಾರದ ಬದ್ಧತೆ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ವೀರಪ್ಪ ಬೌರಿಂಗ್ ಆಸ್ಪತ್ರೆ ಭೇಟಿ ಹಾಗೂ ಅವ್ಯವಸ್ಥೆ ಬಗ್ಗೆ ಬೇಸರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೌರಿಂಗ್ ಆಸ್ಪತ್ರೆ ಗುಣಮಟ್ಟದ ಆಸ್ಪತ್ರೆ. ಹಲವು ವರ್ಷದಿಂದ ಬೆಂಗಳೂರು ಕೇಂದ್ರ ಭಾಗದಲ್ಲಿ ಆರೋಗ್ಯ ಸಂಜೀವಿನಿ ಆಗಿ ಕೆಲಸ ಮಾಡಿದೆ. ಕಟ್ಟಡ ಬಹಳಷ್ಟು ಹಳೆಯದಾಗಿದೆ. ಇದನ್ನೂ ಓದಿ :- ಹಲವು ವರ್ಷಗಳ ಮೀಸಲಾತಿ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ – ಶ್ರೀರಾಮುಲು
ನಮ್ಮ ಸರ್ಕಾರ 500 ಹಾಸಿಗೆ ಆಸ್ಪತ್ರೆ ಮಾಡಲು ನಿರ್ಧರಿಸಿದೆ. ಕೋವಿಡ್ ಸಂದರ್ಭದಲ್ಲಿ ಹಾಸಿಗೆ ಕೂಡ ಹೆಚ್ಚಿಸಿದ್ದೇವೆ ಎಂದು ಹೇಳಿದ್ರು. ಆಂಬ್ಯುಲೆನ್ಸ್ ಡ್ರೈವರ್ ಗಳ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಇಲಾಖೆ ಮತ್ತು ಸಂಬಂಧಿಸಿದವರ ಜೊತೆ ಚರ್ಚೆಯಾಗಿದೆ. ಸರ್ಕಾರ ಈಗಾಗಲೇ ಸಂಸ್ಥೆಗೆ ಹಣ ಪಾವತಿ ಮಾಡಿದೆ. ಆದ್ರೆ ಸಂಸ್ಥೆ ಅವರಿಗೆ ವೇತನ ಪಾವತಿ ಮಾಡಿಲ್ಲ. ಅದರ ಬಗ್ಗೆ ಶೀಘ್ರವೇ ನಿರ್ಧಾರ ಮಾಡಲಿದ್ದೇವೆ ಎಂದು ತಿಳಿಸಿದ್ರು.
ಇದನ್ನೂ ಓದಿ :- ಬೌರಿಂಗ್ ಆಸ್ಪತ್ರೆಗೆ ಹೈಕೋರ್ಟ್ ನ್ಯಾ.ಬಿ.ವೀರಪ್ಪ ದಿಢೀರ್ ಭೇಟಿ – ವೈದ್ಯರ ವಿರುದ್ಧ ಗರಂ