ಸಿದ್ದರಾಮಯ್ಯ ಅವರಿಗೆ ಇಷ್ಯುಗಳೇ ಇಲ್ಲ. ಅನೇಕ ಕಾಂಗ್ರೆಸ್ ಮುಖಂಡರು ನನ್ನ ಹತ್ರ ಆ ವಿಡಿಯೋ ಇದೆ, ಈ ವೀಡಿಯೋ ಇದೆ ಅಂತಾ ಹೇಳಿದ್ರು ಎಂದು ತಮಕೂರಿನಲ್ಲಿ ಗೃಹ ಸಚಿವ ಆರಗ ಜ್ಙಾನೇಂದ್ರ ಹೇಳಿದ್ದಾರೆ.
ಆದರೆ ಅವರ್ಯಾರು ತನಿಖಾಧಿಕಾರಿಗಳಿಗೆ ಅದನ್ನ ಒಪ್ಪಿಸ್ತಿಲ್ಲ. ಅದರ ಬದಲಾಗಿ, ಯಾರ್ಯಾರದ್ದೋ ಚಾರಿತ್ರ್ಯ ಹರಣ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರಗ ಆರೋಪಿಸಿದ್ದಾರೆ. ಇವರಿಗೆ ಪ್ರಾಮಾಣಿಕವಾದ ತನಿಖೆಯಲ್ಲಿ ನಂಬಿಕೆ ಇಲ್ಲ.ಇವರ ದೊಡ್ಡ ದೊಡ್ಡ ಮುಖಂಡರು ಅದರಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅದರಲ್ಲಿ ಭಾಗಿಯಾಗಿದ್ದಾರೆ.
ಪೂನಾದಲ್ಲಿ ದಿವ್ಯಾ ಹಾಗರಗಿ ಅವರಿಗೆ ಆಶ್ರಯ ಕೊಟ್ಟಿರೋದು ಕಾಂಗ್ರೆಸ್ನವರೇ ಎಂದು ಆರಗ ಬಾಂಬ್ ಸಿಡಿಸಿದ್ದಾರೆ. ನಾವು ಯಾವುದೇ ಪಕ್ಷ ಪಂಗಡ ನೋಡದೆ ಮೂಗು ತೂರಿಸದೇನೆ ತನಿಖೆ ಮಾಡಲು ಫ್ರೀಯಾಗಿ ಬಿಟ್ಟಿದ್ದೇವೆ. ಯಾರ ದಾಖಲಾತಿ ಸಿಗುತ್ತೋ ಅಂತವರನ್ನ ಅರೆಸ್ಟ್ ಮಾಡ್ತಿದ್ದೇವೆ. ಸಿದ್ದರಾಮಯ್ಯ ನವರ ಕಾಲದ್ದೇ ಸಿಐಡಿ. ಈಗ ಅದರ ಮೇಲೆ ನಂಬಿಕೆ ಇಲ್ಲ ಅಂದರೆ ಹೇಗೆ. ಇದನ್ನೂ ಓದಿ :- ಪಿಎಸ್ಐ ಪರೀಕ್ಷೆ ಅಕ್ರಮವನ್ನು ಪೊಲೀಸರೇ ಹೊರತಂದಿದ್ದಾರೆ – ಹೆಚ್.ಡಿ ಕುಮಾರಸ್ವಾಮಿ
ನಂಬಿಕೆ ಇಲ್ಲಾ ಅಂದರೇ ಸಿಐಡಿಯನ್ನ ಆಗಲೇ ವಿಸರ್ಜನೆ ಮಾಡಬೇಕಿತ್ತು ಎಂದು ತಿಳಿಸಿದ್ದಾರೆ. ಲೋಕಾಯುಕ್ತವನ್ನ ಕತ್ತು ಹಿಸುಕಿದವರು ಯಾರು. ಪ್ರಬಲವಾಗಿದ್ದ ಲೋಕಾಯುಕ್ತವನ್ನ ಕಾಂಗ್ರೆಸ್ ಕಾಲದಲ್ಲಿ ಕತ್ತುಹಿಸುಕಲಾಯಿತು. ಆಮೇಲೆ ಅವರೇ ಎಸಿಬಿ ಮಾಡಿದರು ಎಂದು ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ರು. ಇದನ್ನು ಓದಿ :-ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವ ಆಗಲ್ಲ – ಶ್ರೀ ರಾಮುಲು