ನಮ್ಮ ದೇಶದಲ್ಲಿ ಕಾಂಗ್ರೆಸ್ ನವರ ಕಾಲದಲ್ಲಿ 500 ಟನ್ ಕಲ್ಲಿದ್ದಲು ಉತ್ಪಾದನೆ (Coal production) ಆಗ್ತಾ ಇತ್ತು ಎಂದು ಪ್ರಹ್ಲಾದ್ ಜೋಶಿ (Prahalad joshi) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮ ಕಾಲದಲ್ಲಿ 800 ಟನ್ ಕಲ್ಲಿದ್ದಲು ಉತ್ಪಾದನೆ ಆಗ್ತಾ ಇದೆ.
ತಾವೇ ಹಾಳು ಮಾಡಿದ ಪಠ್ಯಪುಸ್ತಕವನ್ನ ವಿವಾದ ಮಾಡ್ತಾರೆ. ಮೋದಿಯವರ ಮಾರ್ಗದರ್ಶನದಲ್ಲಿ ಅನೇಕ ಯೋಜನೆಗಳು ಬರ್ತಾ ಇರೋದು. ಮೋದಿ (Modi) ಹಾಗೂ ಯೋಗಿ (Yogi) ನೇತೃತ್ವದಲ್ಲಿ ಸಾಕಷ್ಟು ಬದಲಾವಣೆಗಳು, ಕೆಲಸಗಳು ಆಗಿವೆ. ಬಸವರಾಜ್ ಬೊಮ್ಮಾಯಿ (Basavaraj bommai) ನೇತೃತ್ವದಲ್ಲಿ ಉತ್ತಮ ಕೆಲಸಗಳಾಗಿವೆ. ಇದನ್ನ ಡೈವರ್ಟ್ ಮಾಡಲು ಈ ರೀತಿಯ ಆರೋಪಗಳನ್ನ ಮಾಡ್ತಾ ಇದ್ದಾರೆ. ಇಬ್ಬರ ಜಗಳವು ಮುಂದುವರೆದಿದೆ, ಒಂದು ಕಡೆ ಸಿದ್ದರಾಮೋತ್ಸವ ಮಾಡ್ತಾ ಜಗಳ ಆಡ್ತಾ ಇದ್ದಾರೆ. ಮೋದಿ ಮಾರ್ಗದರ್ಶನದಲ್ಲಿ ಬೊಮ್ಮಾಯಿ ತಂದ ಕಾರ್ಯ ಕ್ರಮಗಳ ಬಗ್ಗೆ ಜನರಿಗೆ ತಲುಪ ಬಾರದು ಅಂತ ಹೀಗೆ ಆರೋಪ ಮಾಡ್ತಾ ಇದಾರೆ ಎಂದು ತಿಳಿಸಿದರು.
ಇದೇ ವೇಳೆ ಸೋಶಿಯಲ್ ಮೀಡಿಯಾ (Social media) ಮೂಲಕ ಇದಕ್ಕೆ ಉತ್ತರ ಕೊಡಲು ಆಗಲ್ಲ. ನಾವು ಜನರ ಮುಂದೆ ಹೋಗ್ಬೇಕು, ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡ್ತಾ ಇದೆ, ಅದಕ್ಕೆ ಕೊಡುವ ಉತ್ತರ ಇದೆ.ಬಡವರಿಗೆ ನಾವು ಏನ್ ಮಾಡಿದ್ವಿ ಅದನ್ನ ಡೈವರ್ಟ್ ಮಾಡುವ ಉದ್ದೇಶ ಇದು. ಅವರಿಗೆ ಉತ್ತರವನ್ನ ಸಿಎಂ ಹಾಗೂ ಅಧ್ಯಕ್ಷರು ಕೊಡ್ತಾರೆ. ಬಡವರ ಬಂಧು ನಮ್ಮ ಮೋದಿಯವ್ರು ಎಂದು ಹೇಳಿದರು.
ಇದೇ ವೇಳೆ ಭಯೋತ್ಪಾದನೆಗೆ ಬಿಜೆಪಿ ಲಿಂಕ್ ಇದೆ ಅಂತಾ ಕಾಂಗ್ರೆಸ್ ನವ್ರು ಮಾತಾಡ್ತಾರೆ. ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮಾಣ ಮಾಡಿದ್ದು ಅಂದರೆ ಕಾಂಗ್ರೆಸ್ ನವ್ರು. ಇವ್ರು ಭಯೋತ್ಪಾದನೆ, ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ. ಇವ್ರು ಕಾಲದಲ್ಲಿ 530 ಟನ್ ಕಲ್ಲಿದ್ದಲು ಉತ್ಪಾದನೆ ಆಗ್ತಿತ್ತು. ಆದರೆ ನಮ್ ಕಾಲದಲ್ಲಿ 830 ಟನ್ ಕಲ್ಲಿದ್ದಲು ಉತ್ಪಾದನೆ ಮಾಡ್ತಿದ್ದೇವೆ. ನಮ್ಮಲ್ಲಿ ಎಲ್ಲಿಯೂ ಭ್ರಷ್ಟಾಚಾರವಿಲ್ಲ. ತಾವೇ ಹಾಳು ಮಾಡಿರುವ ಪಠ್ಯ ಪುಸ್ತಕದ ಬಗ್ಗೆ ಸರಿ ಮಾಡೋಕೆ ಹೋದ್ರೆ, ಅದಕ್ಕೆ ಒಂದು ಮಾತಾಡ್ತಾರೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಮತ್ತೆ ಮತ್ತೆ ನಮ್ಮ ಸರ್ಕಾರ ಬರ್ತಿರೋದಕ್ಕೆ ಈ ರೀತಿ ಮಾತಾಡ್ತಿದ್ದಾರೆ. ಕರ್ನಾಟಕದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಒಳ್ಳೆಯ ಆಡಳಿತ ನಡೀತ್ತಿದೆ. ಆದರೆ ಇದನ್ನು ಡೈವರ್ಟ್ ಮಾಡಲು ಸುಳ್ಳಿನ ಕಾರ್ಖಾನೆ ಗಳನ್ನೇ ಸೃಷ್ಟಿ ಮಾಡ್ತಿದ್ದಾರೆ. ಇದನ್ನೂ ಓದಿ : – ಸಿದ್ದರಾಮಯ್ಯ ಉತ್ಸವ ಎನ್ನುವುದಕ್ಕೆ ಸಂವಿಧಾನದಲ್ಲಿ ಮಾನ್ಯತೆ ಇಲ್ಲ- ಎಚ್.ಸಿ. ಮಹದೇವಪ್ಪ
ಸಿದ್ದರಾಮಯ್ಯ (Siddaramaiah) , ಡಿಕೆಶಿ (DK.Shivkumar) ಬಡಿದಾಡಿಕೊಳ್ತಿದ್ದಾರೆ, ಸಿದ್ದರಾಮಯ್ಯ ಸಿದ್ದರಾಮೋತ್ಸವ ಮಾಡಲಿ. ನಾವು ಅವರ ಅಂತ್ಯೋತ್ಸವ ಮಾಡ್ತೀವಿ ಅಂತಾ ಅವರ ವಿರುದ್ದ ಡಿಕೆಶಿ ಟೀಮ್ ಮಾತಾಡಿಕೊಳ್ತಾರೆ. ಭಯೋತ್ಪಾದನೆಗೆ ಚಿಕನ್ ಮಟನ್ ತಿನ್ನಿಸಿದವರು ಕಾಂಗ್ರೆಸ್ ನವ್ರು. ಈ ರೀತಿಯ ಡೈವರ್ಟ್ ಮಾಡೋರಿಗೆ ಮೋದಿ ಕಾರ್ಯದ ಮೂಲಕ ಉತ್ತರ ಕೊಡಬೇಕು ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ : – ಕೆ.ಆರ್.ಎಸ್. ಅಣೆಕಟ್ಟೆ ಭರ್ತಿಗೆ ಕ್ಷಣ ಗಣನೆ – ಮೈದುಂಬಿ ಹರಿಯುತ್ತಿದೆ ಗೋಕಾಕ್ ಫಾಲ್ಸ್