ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಗಂಭೀರ ಆರೋಪ

ಮಾಜಿ ಸಚಿವ ರಮೇಶ್ ಜಾರಕಿಹೊಳಿ (RAMESH JARAKIHOLI )ಸಮ್ಮಿಶ್ರ ಸರ್ಕಾರ ಬೀಳಿಸಿದ ರೂವಾರಿ. ಅವರು 819 ಕೋಟಿ ರೂ. ಸಾರ್ವಜನಿಕ ಹಣ ಲೂಟಿ ಮಾಡಿದ್ದಾರೆ. ಅಮಿತ್ ಶಾ, ದೇವೇಂದ್ರ ಫಡ್ನವೀಸ್, ಸಿಎಂ ಬೊಮ್ಮಾಯಿ (BASAVARAJ BOMMAI )ಈ ವಂಚನೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಇದುವರೆಗೆ ರಮೇಶ್ ಗೆ ಒಂದು ನೊಟೀಸ್ ಸಹ ನೀಡಲಾಗಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ (lakshman ) ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸೌಭಾಗ್ಯ ಲಕ್ಷ್ಮಿ ಶುಗರ್ (SOWBHAGYA LAKSHMI ) ಲಿಮಿಟೆಡ್ ನವರು ಹಲವು ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದಾರೆ. ಎಷ್ಟು ಜನರಿಗೆ ಸಾಲ ಕೊಡಬೇಕು ಅಂತ ಅವರೇ ದಾಖಲೆ ಸಲ್ಲಿಸಿದ್ದಾರೆ. ಇದರ ತನಿಖೆಯೂ ನಡೀತಿದೆ. ಅಭಿನಂದನ್ ಪಾಟೀಲ್, ರಮೇಶ್ ಜಾರಕಿಹೊಳಿಯವರ ಬೇನಾಮಿ. ಇವರ ಅರಿಹಂತ್ ಸೊಸೈಟಿ ಯಿಂದ 48 ಕೋಟಿ ರೂ ಸಾಲ ಪಡೆದಿದ್ದಾರೆ. 578 ಕೋಟಿ ರೂ ಸಾಲವನ್ನು ವಿವಿಧ ಡಿಸಿಸಿ ಬ್ಯಾಂಕ್ ಗಳಿಂದ ರಮೇಶ್ ಪಡೆದಿದ್ದಾರೆ. 156 ಕೋಟಿ ರೂ. ಆದಾಯ ತೆರಿಗೆ ಕಟ್ಟದೇ ರಮೇಶ್ ಜಾರಕಿಹೊಳಿ ವಂಚನೆ ಮಾಡಿದ್ದಾರೆ. ಅಪೆಕ್ಸ್ ಬ್ಯಾಂಕ್ ನಿಂದ ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪೆನಿಗೆ 2021 ರಲ್ಲಿ ನೊಟೀಸ್ ಕೊಟ್ಟಿದ್ದಾರೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ (PRAKASH ) ನೊಟೀಸ್ ಕೊಟ್ಟಿದ್ದಾರೆ. ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪೆನಿ ಸಾಲ ಮರುಪಾವತಿಸಿಲ್ಲ. ಕಂಪೆನಿಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಉಲ್ಲೇಖ ಇದೆ ಎಂದು ವಿವರಿಸಿದರು. ಇದನ್ನೂ ಓದಿ : –  ಮಂತ್ರಾಲಯ ರಾಯರ ಮಠದಲ್ಲಿ ಹಣ ವಸೂಲಿ – 25 ರೂ ಗೆ ಸಿಗುವ ಪರಿಮಳ ಪ್ರಸಾದ 400 ರೂ. ಗೆ ಮಾರಾಟ


ಇಡಿ ಏನು ಮಾಡ್ತಿದೆ?, ಕೇಂದ್ರ ಸರ್ಕಾರ ಏನ್ ಮಾಡ್ತಿದೆ?, ರಮೇಶ್ ಜಾರಕಿಹೊಳಿ ವಂಚನೆ ಇಡಿ ಕಣ್ಣಿಗೆ ಬಿದ್ದಿಲ್ವಾ..?. ನಾನು. ಬೆಂಗಳೂರಿನಲ್ಲಿ ಇರುವ ಇಡಿ ಕಚೇರಿಯಲ್ಲಿ ದೂರು ದಾಖಲು ಮಾಡ್ತೇನೆ. ರಮೇಶ್ ಜಾರಕಿಹೊಳಿ ವಂಚನೆ ವಿರುದ್ಧ ದೂರು ಕೊಡ್ತೇನೆ. ನಂತರ ಹೈಕೋರ್ಟ್ ನಲ್ಲಿ ಐಟಿ ವಿರುದ್ಧ ಪೆಟಿಷನ್ ಹಾಕ್ತೇನೆ. ಐಟಿಯವರು ರಮೇಶ್ ಜಾರಕಿಹೊಳಿಗೆ ಕೇವಲ ಒಂದು ನೊಟೀಸ್ ಕೊಟ್ಟು ಸುಮ್ಮನಾಗಿದೆ. ಐಟಿ ಇಲಾಖೆಯಿಂದ ಮುಂದೆ ಕಾನೂನು ಕ್ರಮ ಯಾಕೆ ಕೈಗೊಳ್ಳಲಿಲ್ಲ?. ಐಟಿ ಸರ್ಕಾರದ ಕೈಗೊಂಬೆಯಾಗಿ ಇದೆಯಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : – ಬಳ್ಳಾರಿಯಲ್ಲಿ ನೂತನ ಜಿಲ್ಲಾ ನ್ಯಾಯಾಲಯ ಲೋಕಾರ್ಪಣೆಗೊಳಿಸಿದ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!