ನಮ್ಮ ರಾಜಾಹುಲಿ ಭಾಷಣಕ್ಕೆ ಕಾಂಗ್ರೆಸ್ ( congress ) ನವರು ತತ್ತರಿಸಿ ಹೋಗಿದ್ದಾರೆ. ಬಿಎಸ್ ವೈ ( BSY ) ಗೆ ಅರಳು ಮರಳು ಅಂತಿದ್ದಾರೆ. ಆದ್ರೆ ರಾಜಾಹುಲಿ ಯಾರಿಗೂ ಜಗ್ಗಲ್ಲ ಬಗ್ಗಲ್ಲ ಎಂದು ವಿಜಯನಗರದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ( BASAVARAJ BOMMAI ) ಹೇಳಿದ್ದಾರೆ.
ಬಿಎಸ್ ವೈ ಗೆ ಇಂದಿಗೂ ಅದೇ ಸ್ಪೂರ್ತಿ ಇದೆ. ಬಿಎಸ್ ವೈ ಅವರನ್ನ ಅಧಿಕಾರದಿಂದ ಇಳಿಸಲು ಎನೆಲ್ಲಾ ಮಾಡಿದ್ರಿ ಅಂತ ಗೊತ್ತಿದೆ. ಕೇಸ್ ಹಾಕಿಸಿದ್ರು. ಶಾಶ್ವತವಾಗಿ ಅಧಿಕಾರದಿಂದ ದೂರ ಇಡಲು ಯತ್ನಿಸಿದ್ರು. ಕರ್ನಾಟಕದ ಹೃದಯ ಸಿಂಹಾಸನದಲ್ಲಿ ಬಿಎಸ್ ವೈ ಇದ್ದಾರೆ. ಸಿದ್ದರಾಮಯ್ಯ ( SIDDARAMAIAH ) ನವರದ್ದು ವಿತಂಡವಾದ. ನಾವೂ ಮಾತನಾಡಬಹುದು. ಮಹಾತ್ಮ ಗಾಂಧಿ ಪಾದದ ದೂಳಿಗೆ ನೆಹರು ಸಮಾನರಾ..? ಪ್ರಪಂಚದಲ್ಲಿ ಕೋವಿಡ್ ಆವರಿಸಿತು. ಆದ್ರೆ ಮೋದಿಯವರು ದೇಶದ ಜನರ ಆರೋಗ್ಯದ ಸುರಕ್ಷತೆಗೆ ಗಮನ ನೀಡಿದ್ರು. ಪ್ರವಾಹಕ್ಕೆ ಸ್ಪಂದಿಸಿದ್ದಾರೆ. ಆರೋಗ್ಯಕ್ಕೆ ಗಮನ ಹರಿಸಿದ್ದಾರೆ. ಭೇಟಿ ಪಡಾವೋ ಬೇಟಿ ಬಚಾವೋ ಸೇರಿದಂತೆ ಹಲವಾರು ಯೋಜನೆಗಳನ್ನ ಮಾಡಿದ್ದಾರೆ. ನಿನ್ನೆ ವಿಶ್ವಬ್ಯಾಂಕ್ ವರದಿ ಬಂದಿದೆ. ಬೇರೆ ಎಲ್ಲ ದೇಶಗಳಲ್ಲಿ ಆರ್ಥಿಕ ಹಿಂಜರಿತ ಕಂಡಿದೆ. ಆದ್ರೆ ಭಾರತ ಆರ್ಥಿಕ ಸಮಾನತೆ ಕಂಡುಕೊಂಡು ಸಧೃಡವಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ. ಸಿದ್ದರಾಮಣ್ಣ ನಿಮ್ಮಗೆ ಅರಳು ಮರಳು. ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ಯಾವತ್ತೂ ಯೋಚನೆ ಮಾಡಲಿಲ್ಲ. ದೀನದಲಿತರ ಹೆಸರು ಹೇಳಿಕೊಂಡು. ಇದನ್ನೂ ಓದಿ :- ಬಿಜೆಪಿ ಮಾಡಿದಷ್ಟು ಅಭಿವೃದ್ಧಿ ಕೆಲಸವನ್ನ ಸಿದ್ದರಾಮಯ್ಯ ಮಾಡೋದಕ್ಕೆ ಸಾಧ್ಯನಾ..? – ಯಡಿಯೂರಪ್ಪ
ಮತ ಪಡೆದು ರಾಜಕೀಯ ಮಾಡಿದ್ರೀ. ದಲಿತರನ್ನ ಕತ್ತಲೆಯಲ್ಲಿ ಇಟ್ಟಿದ್ರಿ. ನಮಗೂ ಕಾನೂನು ಗೊತ್ತಿದೆ. ಯಾವುದಾದ್ರು ಸಾಧನೆ ಮಾಡೋಕೆ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಬೆಕ್ಕು ಅಡ್ಡ ಬರುತ್ತೆ ಅಂದ್ರೆ ಮನೆಯಿಂದ ಹೊರಗೆ ಬರೋಕೆ ಇರದೇ ಆಗುತ್ತಾ..? ಬೆಕ್ಕು ಅಲ್ಲ ಹುಲಿ ಅಡ್ಡ ಬಂದ್ರು ನಾವೂ ಹೆದರಲ್ಲ. ನೀವೂ ಸಮುದಾಯ ಒಡೆಯುವ ಪ್ರಯತ್ನ ಮಾಡಿದ್ರೀ. ಲಿಂಗಾಯತ , ವೀರಶೈವ ಅಂತಾ ಧರ್ಮ ಒಡೆದ್ರಿ. ನಮ್ಮ ಸರ್ಕಾರದಲ್ಲಿ ಎಲ್ಲರೂ ಒಗಟ್ಟಾಗಿ ಒಂದಾಗಿ ಸಾಗಿ ಅಂತಿದ್ದೇವೆ. ನೀವೂ ದಲಿತ ( DALITHA ) ಮಕ್ಕಳ ಹಾಸಿಗೆ ದಿಂಬು ಸಹ ಬಿಡದೇ ಭ್ರಷ್ಟಾಚಾರ ಮಾಡಿದ್ರಿ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ದುಡ್ಡೇ ಖರ್ಚು ಮಾಡಲಿಲ್ಲ. ನಮ್ಮ ಸರ್ಕಾರದಲ್ಲಿ ಯಾರಿಗೂ ಭಯ ಇಲ್ಲ. ನಿಮ್ಮ ಸರ್ಕಾರ ಇದ್ದಾಗ ೨೪ ಹಿಂದುಗಳ ಹತ್ಯೆ ಆಯ್ತು. ಆದ್ತೆ ಈಗ ಅ ಭಯ ಇಲ್ಲ. ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ಮಾಡಿ ಅಂತಾರೆ. ನಾವೂ ಲೋಕಾಯುಕ್ತ ಮಾಡಿದ್ವಿ. ನಿಮ್ಮ ಸರ್ಕಾರ ಇದ್ದಾಗ ಕೇಸ್ ಬಿಳ್ತಾ ಇದ್ವು. ಸಚಿವರ ಮೇಲೆ ಕೇಸ್ ಆಗ್ತಾ ಇದ್ವು. ಅದಕ್ಕೆ ಎಸಿಬಿಯನ್ನ ಅರಂಭ ಮಾಡಿದ್ರಿ. ಈಗ ಲೋಕಾಯುಕ್ತ ಮತ್ತೆ ಬಂದ ಮೇಲೆ ನಿಮ್ಮ ಹಗರಣಗಳು ತನಿಖೆ ಆಗುತ್ತವೆ. ಆಗ ಕಾಂಗ್ರೆಸ್ ನ ಭ್ರಷ್ಟಾಚಾರದ ಬಣ್ಣ ಬಯಲಾಗುತ್ತದೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು.
ಇದನ್ನೂ ಓದಿ :- ಸಿದ್ದರಾಮಯ್ಯ ಉತ್ತರ ಪ್ರದೇಶದಲ್ಲಿ ಕ್ಷೇತ್ರ ಹುಡುಕಲಿ – ನಳೀನ್ ಕುಮಾರ್ ಕಟೀಲ್ ವ್ಯಂಗ್ಯ