ಶಿವಸೇನಾ (Shivasena) ನಾಯಕ ಏಕನಾಥ್ ಶಿಂಧೆ (Eknath shinde) ಪಕ್ಷದ ಇತರ ಶಾಸಕರೊಂದಿಗೆ ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದಾರೆ.
ಈ ಮಧ್ಯೆ ಮಿತ್ರ ಕಾಂಗ್ರೆಸ್ ನ ಹಿರಿಯ ನಾಯಕ ಕಮಲ್ ನಾಥ್ ತಮ್ಮ ಪಕ್ಷ ಒಗ್ಗಟ್ಟಾಗಿದೆ, ತಮ್ಮ ಶಾಸಕರು “ಮಾರಾಟಕ್ಕಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ರಾಜಕೀಯ (Maharastra politics) ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎಐಸಿಸಿ ವೀಕ್ಷಕರಾಗಿ ನೇಮಕಗೊಂಡಿರುವ ಕಮಲ್ ನಾಥ್ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad pavar) , ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಇಂದು ಚರ್ಚೆ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ : – ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಳದ ಶಾಕ್ – ಮುಂದಿನ ವರ್ಷದಿಂದ ಏಕರೂಪದ CET ನಡೆಸಲು ಚಿಂತನೆ
ಶಿವಸೇನೆ ತನ್ನ ಶಾಸಕರನ್ನು ನೋಡಿಕೊಳ್ಳಲಿದೆ. ಅದು ಹೇಗೆ ತನ್ನ ಶಾಸಕರನ್ನು ನಿಭಾಯಿಸುತ್ತದೆ ಎಂಬುದನ್ನು ನೋಡಬೇಕು” ಎಂದಿದ್ದಾರೆ. ಕಮಲ್ ನಾಥ್ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದ್ದು, ಬಳಿಕ ಉದ್ಧವ್ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಇದನ್ನೂ ಓದಿ : – ಪಂಚಮಸಾಲಿ ಮೀಸಲಾತಿ ಹೋರಾಟ – ಸಂಧಾನ ಯಶಸ್ವಿ – ಎರಡು ತಿಂಗಳ ಕಾಲಾವಕಾಶ ಕೇಳಿದ ಸಿಎಂ