ಕಲ್ಯಾಣ ಕರ್ನಾಟಕಕ್ಕೆ 371 ಜೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ( CONGRESS ) ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕೊಪ್ಪಳ ( KOPPALA ) ದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಕಲ್ಯಾಣ ಕರ್ನಾಟಕಕ್ಕೆ 371 ಜೆ ಮೀಸಲಾತಿ ಕೊಡಲಾಯ್ತು. ನಾನು ಇಂಧನ ಸಚಿವ ಇದ್ದಾಗ ಕಲ್ಯಾಣ ಕರ್ನಾಟಕ ಭಾಗಕ್ಕೆ ಉದ್ಯೋಗ ಕೊಟ್ಟಿದ್ದೇನೆ. ನೀರಾವರಿ ಯೋಜನೆ ಜಾರಿಗೆ ಕಾಂಗ್ರೆಸ್ ಬದ್ಧವಾಗಿದೆ. ಮೋದಿ 2 ಲಕ್ಷ ಕೋಟಿ ಉದ್ಯೋಗ ಕೊಡ್ತಿನಿ ಅಂತಾ ಹೇಳಿದ್ರು. ಇದು ಸಾಧ್ಯ ಆಗಲಿಲ್ಲ. ನಾವು ನುಡಿದಂತೆ ನಡೆಯುತ್ತೇವೆ. ಬಿಜೆಪಿಗರು 600 ಆಶ್ವಾಸನೆ ಕೊಟ್ಟಿದ್ದರು, 6 ಕೂಡ ನೆರವೇರಿಸಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ಸೃಷ್ಠಿಗೆ ಕಾಂಗ್ರೆಸ್ ಬದ್ಧ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೈಗಾರಿಕೆ ಆರಂಭಿಸುವವರಿಗೆ ವಿಶೇಷ ಪ್ಯಾಕೇಜ್ ಕೊಡ್ತಿವಿ. ಕಡಿಮೆ ದರದಲ್ಲಿ ವಿದ್ಯುತ್ ಕೊಡ್ತಿವಿ ಎಂದು ಹೇಳಿದ್ರು.
ಯಡಿಯೂರಪ್ಪ, ಬೊಮ್ಮಾಯಿ ವಿರುದ್ಧ ಡಿಕೆಶಿ ವಾಗ್ದಾಳಿ
ಅಧಿಕಾರಕ್ಕೆ ಬಂದ 1 ವರ್ಷದಲ್ಲಿ ರಾಷ್ಟ್ರೀಯ ಬ್ಯಾಂಕ್ ನಲ್ಲಿ ಸಾಲ ಮನ್ನಾ ಮಾಡ್ತೀವಿ ಅಂದಿದ್ರು. ರೈತರ ಆದಾಯ ಡಬಲ್ ಮಾಡ್ತಿವಿ ಅಂದಿದ್ದರು. ಇದ್ಯಾವುದೂ ಆಗಿಲ್ಲ. ಪ್ರತಿ ದಿನ ಪೆಟ್ರೋಲಿಯಂ ದರ ಜಾಸ್ತಿ ಆಗ್ತಿದೆ. ಇದರಿಂದ ದಿನ ಬಳಕೆ ವಸ್ತು ದರ ಜಾಸ್ತಿ ಆಗಿದೆ. 440 ರೂ. ಇದ್ದ ಸಿಲಿಂಡರ್ ಬೆಲೆ 1,100 ಆಗಿದೆ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಗೆ ನಾಚಿಕೆ ಆಗಬೇಕು. ನಾನು ರಾಜ್ಯಾದ್ಯಂತ ಲೈನ್ ಮ್ಯಾನ್ ಹುದ್ದೆ ತುಂಬಿದೆ. ಆಗ ಯಾರಾದ್ರೂ ಹಣ ಕೊಟ್ಟಿದ್ದಾರೆಯೇ? ಈ ಸರ್ಕಾರದಲ್ಲಿ ಇನ್ಸ್ ಪೆಕ್ಟರ್ ಸೇರಿ ಎಲ್ಲ ಹುದ್ದೆ ನೇಮಕಕ್ಕೆ ಹಣ ಪೀಕುತ್ತಿದ್ದಾರೆ. ಇದ್ದೊಂದು ಭ್ರಷ್ಟ ಸರಕಾರ . ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ ( PRIYANKA KHARGE ) ಈ ಬಗ್ಗೆ ಮಾತಾಡಿದ್ರು. ಅದಕ್ಕೆ ಅವರಿಗೆ ನೋಟೀಸ್ ನೀಡಿದ್ರು. ನಿಮಗೆ ಮಾನ, ಮರ್ಯಾದೆ ಇದ್ದರೆ ಕ್ಷಮೆ ಕೇಳಿ ಬೊಮ್ಮಾಯಿಯವರೇ ಎಂದು ಕಿಡಿಕಾರಿದ್ರು. ಇದನ್ನು ಓದಿ : – ನಿನ್ನನ್ನು ಮಂತ್ರಿ ಮಾಡಿದ್ದೇ ನಾನು ಅನ್ನೋದೇ ಮರೆತೆಯೇನಪ್ಪ ವಿಶ್ವನಾಥ್ ? ವಿ ಶ್ರೀನಿವಾಸ ಪ್ರಸಾದ್
ಬಿಜೆಪಿ ( BJP ) ಸರಕಾರ ಕೊರೊನಾ ( CORONA ) ಸಂದರ್ಭದಲ್ಲಿ ಯಾರಿಗೂ ಪರಿಹಾರ ನೀಡಲಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ ಜನ ಸತ್ತರು ಅವರಿಗೂ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಮತ್ತು ಮಾನವೀಯತೆ ಇಲ್ಲ. ಬರೀ ಹಣ ಹಣ ಅಂತಾ ಬಡಿದುಕೊಳ್ತಾರೆ. ವಿದ್ಯಾವಂತರು ಕೂಡ ಬಿಜೆಪಿಯಿಂದ ದೂರ ಹೋಗ್ತಾರೆ. ಮುಂದಿನ ಚುನಾವಣೆಯಲ್ಲಿ 136 ಕಡೆ ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿ 66 ಸ್ಥಾನಕ್ಕೆ ನಿಲ್ಲುತ್ತದೆ. ಬಿಜೆಪಿಗರು ಜನರ ಭಾವನೆ ಜೊತೆ ಆಟ ಆಡ್ತಿದ್ದಾರೆ. ಈ ದೇಶದಲ್ಲಿ ಉಳುವವನಿಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ . ಬಡವರಿಗೆ ಎಲ್ಲ ಯೋಜನೆ ನೀಡಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಜನರ ಬದುಕಿಗೆ ಅನುಕೂಲ ಆಗುವ ಒಂದು ಕಾರ್ಯಕ್ರಮ ನೀಡಲು ಆಗಲಿಲ್ಲ ಬಿಜೆಪಿಯವರಿಗೆ. ಯಡಿಯೂರಪ್ಪ ನವರೇ ನಮ್ಮಲ್ಲಿ ಏನು ಸಮಸ್ಯೆ ಇಲ್ಲ ಅಂತೀರಲ್ಲ. ನೀವು ಯತ್ನಾಳ್ ( YATHNAL ) ಮಾತು ಮರೆತು ಬಿಟ್ಟಿರಾ? ನಿಮ್ಮ ಒಳ ಜಗಳ ನಮಗೂ ಗೊತ್ತು ಎಂದ ಬಿಜೆಪಿ ವಿರುದ್ದ ಕಿಡಿಕಾರಿದ್ರು.
ಇದನ್ನು ಓದಿ : – 100 ದಿನ ಪೂರೈಸಿದ ಭಾರತ್ ಜೋಡೋ ಯಾತ್ರೆ – ಇದೊಂದು ರಾಷ್ಟ್ರೀಯ ಜನಾಂದೋಲನ ಎಂದ ಮಲ್ಲಿಕಾರ್ಜುನ ಖರ್ಗೆ