ಕಾಂಗ್ರೆಸ್ ನವರು ಮೊಸರಿನಲ್ಲಿ ಕಲ್ಲನ್ನು ಹುಡುಕುವ ಕೆಲಸ ಮಾಡ್ತಾರೆ – ಸಿಎಂ ಬೊಮ್ಮಾಯಿ

ಬೂತ್ ಸಶಕ್ತಗೊಳಿಸಲು ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಬೂತ್ ಸಶಕ್ತಗೊಳಿಸಲು ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಶಿವಾಜಿನಗರ (shivaji nagar) ಕ್ಷೇತ್ರದಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಯಕರ್ತರನ್ನ ಹುರಿದುಂಬಿಸಿದರು. ಶಿವಾಜಿನಗರ ವಿಧಾನಸಭಾ ಕ್ಷೇತ್ರ ವಸಂತನಗರ (vasantha nagara)ವಾರ್ಡ್ ಬೂತ್ ನಂ.50 ಇಲ್ಲಿಂದ ವಿಜಯ ಸಂಕಲ್ಪ ಪ್ರಾರಂಭವಾಗುತ್ತಿದೆ. ಬೂತ್ ಮಟ್ಟದ ವಿಜಯ ಸಾಧ್ಯವಾಗಿಸಲು ಬೂತ್ ಮಟ್ಟದ ಅಭಿಯಾನವನ್ನು ಕೈಗೊಳ್ಳಲು ರಾಷ್ಟ್ರ ಮತ್ತು ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಚಾಲನೆಯನ್ನು ನೀಡಲಾಗಿದೆ.

ಅತ್ಯಂತ ಕಷ್ಟವಾದ ಕ್ಷೇತ್ರ ಎನಿಸಿರುವ ಶಿವಾಜಿನಗರದಿಂದ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಶಿವಾಜಿನಗರದಲ್ಲಿ ಒಂದು ಕಾಲದಲ್ಲಿ ಬಿಜೆಪಿ ಗೆದ್ದಿತ್ತು. ಕಟ್ಟಾ ಸುಬ್ರಮಣ್ಯ ನಾಯ್ಡು ಹಿಂದೆ ಗೆದ್ದಿದ್ದರು. ಶಿವಾಜಿನಗರ ಕ್ಷೇತ್ರದ ವಿಜಯಕ್ಕಾಗಿ ಇಲ್ಲಿ ಬಂದಿದ್ದೇನೆ. ಇದಕ್ಕೆ ಹೆಚ್ಚಿನ ಸಮಯವನ್ನು ಕೊಡುತ್ತಿದ್ದು, ಕರೆದಾಗ ಬಂದು ಕೆಲಸ ಕಾರ್ಯಗಳನ್ನು ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನವನ್ನು ನೀಡಲಾಗುವುದು ಎಂದರು. ಇದನ್ನು ಓದಿ : –  ನ್ಯೂ ಇಯರ್ ದಿನ ನಮ್ಮ ಮೆಟ್ರೋಗೆ 1 ಕೋಟಿಗೂ ಅಧಿಕ ಆದಾಯ

ವಿಶ್ವದಲ್ಲಿಯೇ ಬಿಜೆಪಿ ಅತಿ ದೊಡ್ಡ ಪಕ್ಷ. ಅತಿ ಹೆಚ್ಚು ಜನ ನಮ್ಮ ತತ್ವ, ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಒಪ್ಪಿರುವುದರಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸದಸ್ಯರಾಗಿದ್ದಾರೆ. ದೇಶಭಕ್ತ, ಸಶಕ್ತ ನಾಯಕತ್ವವನ್ನು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೆ. ಭಾರತದ ಭದ್ರತೆಯ ಜೊತೆಗೆ ಭಾರತದ ಪ್ರಗತಿ, ಆರ್ಥಿಕ, ಸಾಮಾಜಿಕ, ಪ್ರಗತಿಯ ಜೊತೆಗೆ ವಿಶ್ವಮಾನ್ಯ ಭಾರತವನ್ನು ರೂಪಿಸಿರುವ ನಾಯಕರು ಎಂದರು.

ಸ್ಮಾರ್ಟ್ ಸಿಟಿಯಲ್ಲಿ ಆಗಿರುವ ಕೆಲಸ ಕೇವಲ ಬಿಜೆಪಿ (bjp)ಯಿಂದಾಗಿದೆ. ಕಾಂಗ್ರೆಸ್ ಲಾಭ ಮಾಡಿಕೊಳ್ಳುವುದನ್ನು ಬಿಟ್ಟರೆ ಏನೂ ಮಾಡಿಲ್ಲ. 75 ವರ್ಷದಲ್ಲಿ 65 ವರ್ಷ ಕಾಂಗ್ರೆಸ್ ಆಡಳಿತ ಮಾಡಿದೆ. ಇಷ್ಟು ವರ್ಷ ಯಾಕೆ ಮಾಡಿಲ್ಲ. ಶಿವಾಜಿನಗರ ಕ್ಷೇತ್ರವನ್ನು ಒಂದು ಕೊಳಚೆ ಪ್ರದೇಶವಾಗಿ ಇಟ್ಟುಕೊಂಡಿದ್ದರು. ನಮ್ಮ ಸರ್ಕಾರ ಬಂದ ನಂತರ ಸುತ್ತಲಿನ ಕ್ಷೇತ್ರಗಳ ಅಭಿವೃದ್ಧಿಯಾಗುತ್ತಿದೆ. ಬೆಂಗಳೂರಿಗೆ ಎಂಟು ಸಾವಿರ ಕೋಟಿ ಅನುದಾನ ನಗರೋತ್ಥಾಕ್ಕೆ ನೀಡಿದೆ. 2 ಸಾವಿರ ಕೋಟಿ ರೂ.ಗಳನ್ನು ರಾಜಕಾಲುವೆ, ಗಾರ್ಡನ್ ಗಳಿಗೆ, ರಸ್ತೆಗಳಿಗೆ ದೊಡ್ಡ ಪ್ರಮಾಣದ ಅನುದಾನ ನೀಡಿದೆ ಎಂದರು.

ಇದನ್ನು ಓದಿ : –  BREAKING NEWS – ಹಾಡಹಗಲೇ ಕಾಲೇಜಿನಲ್ಲಿ ಯುವತಿಗೆ ಚಾಕು ಇರಿದು ಕೊಲೆ ಮಾಡಿದ ಯುವಕ !

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!