ಬೆಳಗಾವಿ (Belagavi) ಯಲ್ಲಿ ಇಂದು ಕಾಂಗ್ರೆಸ್ (Congress) ಪ್ರಜಾಧ್ವನಿ ಬಸ್ ಯಾತ್ರೆ (Prajadwani bus yatre) ಗೆ ಚಾಲನೆ ಸಿಕ್ಕಿದೆ . ವೀರಸೌಧ ಬಳಿ ಬೆಳಗ್ಗೆ ಕಾಂಗ್ರೆಸ್ ನಾಯಕರು ಯಾತ್ರೆಯನ್ನು ಉದ್ಘಾಟನೆ ಮಾಡಿದ್ದಾರೆ. ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಚಕರ ಧ್ವಜದ ಧ್ವಜಾರೋಹಣ ಮಾಡಿದ್ದಾರೆ.
ಪವಿತ್ರ ಪಂಪಾ ಸರೋವರದ ಜಲವನ್ನು ತೆಗೆದುಕೊಂಡು ಬಂದು ಯಾತ್ರೆಗೆ ಚಾಲನೆ ನೀಡಿದ್ದಾರೆ. ಎರಡು ಬಸ್ ನಲ್ಲಿ ಕಾಂಗ್ರೆಸ್ ನಾಯಕರು ಇಡೀ ರಾಜ್ಯ ಸುತ್ತಲಿದ್ದಾರೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ (Randeep singh surjewala) , ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) , ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಯಾತ್ರೆ ನಡೆಯಲಿದೆ. ಸರ್ಕಾರದ ಭ್ರಷ್ಟಾಚಾರ ಜನರಿಗೆ ತೋರಿಸಲು ಬಸ್ ಯಾತ್ರೆ ಮಾಡಲಿದ್ದಾರೆ. ಇದನ್ನು ಓದಿ :- ಬೆಳಗಾವಿಯಿಂದಲೇ ನಾಳೆ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಶುರು…!
ಬೆಳಗಾವಿಯಿಂದ ಬಸ್ ಮೂಲಕ ಚಿಕ್ಕೋಡಿ ಸಮಾವೇಶದಲ್ಲಿ ನಾಯಕರು ಭಾಗಿಯಾಗಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಚಿಕ್ಕೋಡಿಯಿಂದ ಬೆಳಗಾವಿಗೆ ನಾಯಕರು ಬರಲಿದ್ದಾರೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿ ನಡೆಯುವ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ನಾಯಕರು ಬೆಳಗಾವಿ, ಚಿಕ್ಕೋಡಿಯಲ್ಲಿ ಎರಡು ಕಡೆ ಬಹಿರಂಗ ಸಮಾವೇಶ ನಡೆಸಲಿದ್ದಾರೆ.
ಇದನ್ನು ಓದಿ :- ಭಾರತ್ ಜೋಡೋ ಯಾತ್ರೆ ಪಂಜಾಬ್ ಪ್ರವೇಶಿಸುತ್ತಿದ್ದಂತೆ ಗೋಲ್ಡನ್ ಟೆಂಪಲ್ ಗೆ ರಾಹುಲ್ ಗಾಂಧಿ ಭೇಟಿ