ಹುಬ್ಬಳ್ಳಿ: ಧಾರವಾಡ: ರಾಜ್ಯದಲ್ಲಿ ಹೆಚ್ಚುತ್ತಿರುವ ಕಿಲ್ಲರ್ ಕೊರೊನಾ ಸೋಂಕಿನಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ.
ಹಾರೋಬೆಳವಡಿ ಗ್ರಾಮದ ಶೇಖವ್ವ (75) ಎಂಬ ವೃದ್ಧೆ ಕಳೆದ ಮೂರು ದಿನಗಳ ಹಿಂದಷ್ಟೆ ಕೊರೋನಾಕ್ಕೆ ಬಲಿಯಾಗಿದ್ದರು. ಇಂದು ಆಕೆಯ ಇಬ್ಬರು ಪುತ್ರರು ಇದೇ ಕಾರಣದಿಂದ ಸಾವಿಗೀಡಾಗಿದ್ದಾರೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಘಟಕದಲ್ಲಿ ಇಬ್ಬರು ಸಹೋದರರು ಕರ್ತವ್ಯ ನಿರ್ವಹಿಸುತ್ತಿದ್ದರು.
ಗ್ರಾಮದ ಶಿವಪ್ಪ (49) ಹಾಗೂ ಬೂದಪ್ಪ (42) ( ಹೆಸರು ಬದಲಾವಣೆ ಮಾಡಲಾಗಿದೆ) ಎಂಬುವವರೇ ಕೊರೊನಾಕ್ಕೆ ಬಲಿಯಾದ ದುರ್ದೈವಿಗಳು. ಇದೀಗ ಒಂದೇ ಕುಟುಂಬದ ಮೂವರು ಸದಸ್ಯರು ಕೊರೊನಾಕ್ಕೆ ಬಲಿಯಾಗಿರುವುದರಿಂದ ಇಡೀ ಹಾರೋಬೆಳವಡಿ ಗ್ರಾಮದಲ್ಲಿ ಆತಂಕ ನಿರ್ಮಾಣವಾಗಿದೆ