ಕೊರೊನಾ (CORONA)ಮ ಮಹಾಮಾರಿ ಜನ ಜೀವನದ ಮೇಲೆ ದೊಡ್ಡ ಮಟ್ಟದ ಆಘಾತ ನೀಡಿದೆ. ಈ ವೈರಸ್ ದೇಹವನ್ನು ಹೊಕ್ಕಿಕೊಂಡ ಬಳಿಕ ಅದರಿಂದ ಚೇತರಿಸಿಕೊಂಡರೂ ಮುಂದೆ ಅದು ದೇಹದಲ್ಲಿ ನಾನಾ ರೀತಿಯ ಸಮಸ್ಯೆ ಉಂಟು ಮಾಡುತ್ತಿದೆ. ರಾಜ್ಯದಲ್ಲಿ ಕೊರೊನೋತ್ತರದ ಕೆಮ್ಮು ಕ್ಷಯ (TB) ವಾಗಿ ಉಲ್ಬಣವಾಗುತ್ತಿರುವ ಆತಂಕಕಾರಿ ಅಂಶವೊಂದು ಇದೀಗ ಹೊರಬಿದ್ದಿದೆ.
ಕೊರೊನಾದಿಂದ ಗುಣಮುಖರಾದವರು 15 ದಿನದಿಂದ 1 ತಿಂಗಳು ಕೆಮ್ಮು ಸಾಮಾನ್ಯವೆಂದು ಮೈಮರೆಯುತ್ತಾರೆ. ಆದ್ರೆ ಅದು ಆದ್ರ ಕ್ಷಯವಾಗಿ ಮಾರಕವಾಗುವ ಸಾಧ್ಯತೆಯಿದೆ. ರಾಜ್ಯ ಆರೋಗ್ಯ ಇಲಾಖೆ ದೇಶದಲ್ಲೇ ಮೊದಲ ಬಾರಿಗೆ ಈ ಬಗ್ಗೆ ಸಮೀಕ್ಷೆಗೆ ಮುಂದಾಗಿದೆ.
ಆಗಸ್ಟ್ 16ರಿಂದ 31ರವರೆಗೆ ರಾಜ್ಯಾದ್ಯಂತ ಕೊರೊನಾದಿಂದ ಗುಣಮುಖರಾದವರ ಮನೆ ಭೇಟಿ ಮೂಲಕ ಕ್ಷಯ ಪರೀಕ್ಷೆಗೆ ಮುಂದಾಗುತ್ತಿದೆ. ರಾಜ್ಯದಲ್ಲಿ ಕೊರೊನಾ ಹಾವಳಿ ಆರಂಭವಾದ ಬಳಿಕ ಕ್ಷಯ ಲಕ್ಷಣಗಳಿದ್ದರೂ ಅನೇಕರು ವೈದ್ಯರನ್ನು ಕಾಣುತ್ತಿಲ್ಲ.
ಕ್ಷಯ ರೋಗಕ್ಕೆ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಶ್ವಾಸಕೋಶ, ಮೆದುಳು, ಬೆನ್ನಮೂಳೆ ಭಾಗಗಳಿಗೆ ಹಾನಿಯಾಗುವ ಸಂಭವವಿದೆ. ದೆಹಲಿಯಲ್ಲಿರುವ ಎರಡು ಖಾಸಗಿ ಆಸ್ಪತ್ರೆಯ ವೈದ್ಯರು ಕೋವಿಡ್ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಈಗ ಕ್ಷಯ ರೋಗ ಪತ್ತೆಯಾಗಿದ್ದು 60ರಷ್ಟು ಜನರು 40 ವರ್ಷ ವಯಸ್ಸಿಗಿಂತ ಚಿಕ್ಕವರಾಗಿದ್ದಾರೆ.
ದೆಹಲಿಯ ಮೂಲಚಂದ್ ಆಸ್ಪತ್ರೆಯ ವೈದ್ಯರು ನೀಡಿದ ಮಾಹಿತಿಯ ಪ್ರಕಾರ ಈ ಕ್ಷಯ ರೋಗ ಪ್ರಕರಣಗಳು ಹೆಚ್ಚಾಗಿ ಕೋವಿಡ್ ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಕಾಣಿಸುತ್ತಿದೆಯಂತೆ. ಕೋವಿಡ್ ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಕೆಲವೇ ವಾರಗಳಲ್ಲಿ ಕೆಮ್ಮು ಮತ್ತು ಸಂಜೆ ಜ್ವರ ಕಾಣಿಸುತ್ತಿದ್ದು ಆಸ್ಪತ್ರೆಗೆ ಬಂದಾಗ ಅವರ ಕಫ ಪರೀಕ್ಷೆ, ರಕ್ತ ಪರೀಕ್ಷೆಗಳನ್ನು ಮಾಡಿದಾಗ ಕ್ಷಯ ರೋಗ ಇರುವುದು ಕಂಡು ಬಂದಿದೆ.
ಇದನ್ನು ಓದಿ :- ಹಲಾಲ್ VS ಜಟ್ಕಾ ಕಟ್ – ಯುಗಾದಿಗೆ ಮೊದಲು ಭುಗಿಲೆದ್ದ ಮತ್ತೊಂದು ವಿವಾದ