ವಿಜಯನಗರ (Vijayanagara) ದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ (Rain) ಯಿಂದಾಗಿ ಹತ್ತಿ (Cotton) ಬೆಳೆ ನೀರಿಗಾಹುತಿಯಾಗಿದೆ. ಹೊಸಪೇಟೆ ತಾಲೂಕಿನ ಧರ್ಮಸಾಗರ, ಪಾಪಿನಾಯಕನಹಳ್ಳಿಯಲ್ಲಿ ಮಳೆಯಿಂದಾಗಿ ಲಕ್ಷಂತಾರ ರೂಪಾಯಿ ಬೆಳೆನಾಶವಾಗಿದೆ.
ಜಿಲ್ಲಾಡಳಿತದಿಂದ ಬೆಳೆ ನಷ್ಟದ ಸರ್ವೇ ಕಾರ್ಯ ಆರಂಭಿಸಿದ್ದಾರೆ. ಕಳೆದ ವರ್ಷ ಇದೆ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿ ರೈತ ವಿಷ ಬಾಟಲಿಗೆ ಕೈ ಹಾಕಿದ್ದರು. ಈ ಭಾರೀಯು ಅನ್ನದಾತನ ನೆರವಿಗೆ ಸರ್ಕಾರ ಧಾವಿಸಬೇಕಾಗಿದೆ. ಇದನ್ನು ಓದಿ :- ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಾರ್ಯಕರ್ತರ ಪ್ರತಿಭಟನೆ
ಸಾಲ ಸೂಲ ಮಾಡಿ ಬೆಳೆದ ಬೆಳೆ ಹಾಳಾದ ಕಾರಣಕ್ಕೆ ಎರಡು ಗ್ರಾಮಗಳ ರೈತರು ಚಿಂತಾಕ್ರಾಂತರಾಗಿದ್ದಾರೆ. ಬೆಳೆ ಹಾನಿ ಪರಿಹಾರಕ್ಕಾಗಿ ಕಂದಾಯ ನಿರೀಕ್ಷರು ಈಗಾಗಲೇ ನಷ್ಟದ ಅಂದಾಜನ್ನು ಲೆಕ್ಕಹಾಕುತ್ತಿದ್ದಾರೆ. ಶೀಘ್ರವಾಗಿ ಬೆಳೆ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
ಇದನ್ನು ಓದಿ :- ಬೆಂಗಳೂರಿನ RTOಗೆ ಕೋಟಿ ಪಂಗನಾಮ ವಂಚನೆ ಪ್ರಕರಣ – ಅಧಿಕಾರಿಗಳ ವಿಚಾರಣೆ