ವಿಧಾನಪರಿಷತ್ ಚುನಾವಣೆ (Vidhanaparishat election) ವಿಧಾನಸಭೆ ಚುನಾವಣೆ ಚಿಕ್ಸೂಚಿಯಲ್ಲ ಎಂದು ವಸತಿ ಸಚಿವ ಸೋಮಣ್ಣ (Somanna) ತಿಳಿಸಿದ್ದಾರೆ. ರಾಜ್ಯದಲ್ಲಿ ನಾಲ್ಕಕ್ಕೆ ನಾಲ್ಕು ಸ್ಥಾನವನ್ನ ನಾವು ಗೆಲ್ಲುತ್ತೇವೆ.
ಚಾಮರಾಜನಗರದಲ್ಲಿ (Chamarajanagara) ಮಾತನಾಡಿದ ಅವರು ಈ ಚುನಾವಣೆ ನಮಗೆ ದಿಕ್ಸೂಚಿಯಲ್ಲ.ನನಗೆ ೭೧ ವರ್ಷ, ವಿಜಯೇಂದ್ರಗೆ (Vijayendra) ಇನ್ನು ೪೪ ವರ್ಷ ಅಷ್ಟೆ. ಅವನಿಗೂ ನನಗೂ ಯಾಕೆ ಹೋಲಿಕೆ ಮಾಡ್ತೀರಾ..? ಎಂದು ಪ್ರಶ್ನಿಸಿದ್ದಾರೆ. ನಾನು ಏಳು ಬಾರಿ ಎಂಎಲ್ಎ (MLA) ಆಗಿದ್ದೇನೆ. ಅವನು ಇನ್ನು ಒಂದು ಬಾರಿಯೂ ಆಗಿಲ್ಲ. ಮೈಸೂರಿನಲ್ಲಿ (Mysuru) ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂಬ ಘೋಷಣೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು ಬುದ್ಧಿ ಹೇಳೋದು ಒಂದು ಸಾರಿ. ಪದೆ ಪದೆ ಹೇಳಕ್ಕಾಗಲ್ಲ. ನಾವು ಏನು ಹೇಳಬೇಕು ಅದನ್ನೆಲ್ಲ ಹೇಳಿದ್ದೀವಿ. ಮುಂದಿನದು ಹೈಕಮಾಂಡ್ ಸೂಕ್ಷ್ಮವಾಗಿ ಗಮನಹರಿಸುತ್ತದೆ. ೨೦೨೩ಕ್ಕೆ ಹೈಕಮಾಂಡ್ (High command) ವಿಜಯೇಂದ್ರಗೆ ಟಿಕೆಟ್ ನೀಡಬೇಕು, ಯಾರ್ಯಾರ ಹಣೆಬರಹ ಏನೇನು ಆಗಬೇಕೋ ಅದು ಆಗುತ್ತದೆ ಎಂದು ಹೇಳಿದ್ರು. ಇದನ್ನೂ ಓದಿ :- ವಿಜಯೇಂದ್ರ ಸಿಎಂ ಆಗಲಿ- ಸಿಎಂ ಮಗ ಸಿಎಂ ಆದರೆ ತಪ್ಪೇನು ?- ನಿರಾಣಿ
ಮೇಕೆದಾಟು ವಿಚಾರ
ತಮಿಳುನಾಡಿನವರು (Tamilnadu) ಎಲ್ಲಿಗೆ ಬೇಕಾದರು ಹೋಗಲಿ. ನಮ್ಮ ಹಕ್ಕನ್ನು ಮಾಡೋದಕ್ಕೆ ತಪ್ಪೇನಿಲ್ಲ, ಅವರ ಹಕ್ಕುನ್ನು ನಾವು ಕಸಿದುಕೊಂಡಿಲ್ಲ. ಅವರು ಕುಡಿಯುವ ನೀರಿಗಾಗಿ ಈ ರೀತಿ ಮಾಡಿದ್ದಾರೆ ರಾಜ್ಯದ ಹಕ್ಕನ್ನು ಕಾಯಲು ಬಸವರಾಜ್ ಬೊಮ್ಮಾಯಿ (Basavaraj bommai) ಸರ್ಕಾರ ಬದ್ದವಿದೆ. ನಮ್ಮ ಪಾಲಿನ ನೀರನ್ನು ಪಡೆಯಲು ಯಾರನ್ನು ಕೇಳುವ ಅವಶ್ಯಕತೆಯಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.
ಇದನ್ನೂ ಓದಿ : – ಕೋಲಾರದಲ್ಲಿ ಶಾಸಕರ ಹುಟ್ಟುಹಬ್ಬದಂದು ಬಿರಿಯಾನಿಗಾಗಿ ಮುಗಿಬಿದ್ದ ಜನ