ಬೆಂಗಳೂರು ಮೂಲದ ಜೋಡಿಯೊಂದು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಹೆಗ್ಗುಂಜೆಯ ಕೊತ್ತೂರಿನಲ್ಲಿ ಸಂಭವಿಸಿದೆ.
ಮೃತರನ್ನು ಯಶವಂತ್ ಯಾದವ್ (22) ಮತ್ತು ಜ್ಯೋತಿ (20) ಎಂದು ಗುರುತಿಸಲಾಗಿದ್ದು, ಇವರಿಬ್ಬರು ಮೂರು ದಿನಗಳ ಹಿಂದೆ ಹೆಬ್ಬಾಳದಿಂದ ನಾಪತ್ತೆಯಾಗಿದ್ದರು. ಈ ಕುರಿತು ಮೇ 19 ರಂದು ಹೆಬ್ಬಾಳದಲ್ಲಿ ಹುಡುಗಿ ನಾಪತ್ತೆಯಾಗಿರುವ ಕುರಿತು ಮತ್ತು 20 ರಂದು ಹುಡುಗ ನಾಪತ್ತೆಯಾಗಿರುವ ಕುರಿತು ಆರ್.ಟಿ ನಗರ ಮತ್ತು ಹೆಬ್ಬಾಳ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಇವರಿಬ್ಬರ ಮದುವೆಗೆ ಎರಡು ಕುಟುಂಬಗಳ ವಿರೋಧವಿದ್ದ ಹಿನ್ನೆಲೆ ಮನೆ ಬಿಟ್ಟು ಎರಡು ದಿನಗಳ ಹಿಂದೆ ಮದುವೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಮೃತ ಯಶವಂತ್ ಯಾದವ್ ಮತ್ತು ಜ್ಯೋತಿ ಭಾನುವಾರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿರಬೇಕೆಂದು ಸ್ಥಳಕ್ಕೆ ದೌಡಾಯಿಸಿದ್ದು, ಈ ಸಂದರ್ಭ ಕಾರೊಂದು ಹೊತ್ತಿ ಉರಿಯುತ್ತಿತ್ತು. ಇತ್ತ ಈ ಜೋಡಿಗಳು ಮೃತ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದ್ದರು.
ಇದನ್ನೂ ಓದಿ : – ಪತ್ನಿ ಮೇಲೆ ಅನುಮಾನ ಪತಿಯಿಂದಲೇ ಪತ್ನಿ ಕೊಲೆ