ಕೊರೊನಾ 3ನೇ ಅಲೆಯಲ್ಲಿ ಮಕ್ಕಳ ಚಿಕಿತ್ಸೆಗಾಗಿ ನಿಯಮಗಳನ್ನು ರೂಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಂದ ಮೃತಪಟ್ಟ ಅಥವಾ ಚಿಕಿತ್ಸೆ ಪಡೆಯುತ್ತಿರುವ ಪೋಷಕರ ಮಕ್ಕಳ ರಕ್ಷಣೆಗೆ ಯೋಜನೆ ರೂಪಿಸಲಾಗಿದೆ ಎಂದರು.
30 ಜಿಲ್ಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಜೊತೆಗೆ ಕೋವಿಡ್ ಕೇಂದ್ರ ನಿರ್ಮಿಸಲು ಸರಕಾರ ಮುಂದಾಗಿದ್ದು, ನೋಡಲ್ ಅಧಿಕಾರಿಯನ್ನು ನೇಮಿಸಲಾಗುವುದು. ಇಲಾಖೆಯ 1098 ಸಹಾಯವಾಣಿ ಮೂಲಕ ಸ್ಪಂದಿಸಲಾಗುವುದು. ಮಕ್ಕಳ ಆರೈಕೆ ಮತ್ತು ಪೋಷಣೆಯ ಹೊಣೆಯನ್ನು ಇಲಾಖೆ ವಹಿಸಿಕೊಳ್ಳಲಿದೆ ಎಂದು ಅವರು ಹೇಳಿದರು.
ಪೋಷಕಾಂಶ ಉಳ್ಳ ಆಹಾರ ನೀಡಿ ಮಕ್ಕಳ ಪೋಷಣೆ ಮಾಡಲಾಗುವುದು. ಅನಾಥ ಮಕ್ಕಳ ದತ್ತು ನಿಯಮಾವಳಿಯಂತೆ ದತ್ತು ಪ್ರಕ್ರಿಯೆ ಮಾಡಲಾಗುವುದು. ಸಿಂಗಲ್ ಪೇರೆಂಟ್ ಇದ್ದು ಮಕ್ಕಳು ಅನಾಥರಾದ ಉದಾರಣೆ ಇದೆ ಎಂದು ಶಶಿಕಲಾ ಜೊಲ್ಲೆ ವಿವರಿಸಿದರು.
ತಂದೆ-ತಾಯಿ ಕೊರೊನಾಗೆ ಬಲಿಯಾಗಿದ್ದು ಅಂತಹ ಮಕ್ಕಳಿಗೆ ಏನ್ ಮಾಡೊದು ಎಂಬ ಬಗ್ಗೆ ಚಿಂತನೆ ಮಾಡಲಾಗಿದೆ. ದತ್ತು ಕೇಂದ್ರಗಳು ಕಾರ್ಯ ನಿರ್ವಹಿಸಲಿದ್ದು, 108 ಸಹಾಯ ವಾಣಿ ಕೂಡ ಇದೆ. ಪ್ರತಿದಿ ಸಹಾಯವಾಣಿಗೆ 23 ಸಾವಿರಕ್ಕೂ ಅಧಿಕ ಕರೆಗಳು ಬರುತ್ತಿದೆ ಎಂದು ಅವರು ವಿವರಿಸಿದರು. ಚಿಕಿತ್ಸೆ ಅಥವಾ ನೆರವಿಗಾಗಿ ಮಕ್ಕಳ ಸಂಖ್ಯೆ ಜಾಸ್ತಿ ಆದಲ್ಲಿ ವಿಶೇಷ ಮಕ್ಕಳ ಸಹಾಯ ತಗೆದುಕೊಳ್ಳಲಾಗುವುದು. ತಂದೆ ತಾಯಿ, ಹತ್ತಿರದ ಸಂಬಂಧಿಕರು ಮಕ್ಕಳನ್ನು ನೋಡಿಕೊಳ್ಳಲು ಮುಂದೆ ಬಂದರೆ ಒಪ್ಪಿಗೆ ಪತ್ರ ಪಡೆಯಲಾಗುವುದು ಎಂದು ಅವರು ಹೇಳಿದರು.