ಚೀನಾ (China) ದಲ್ಲಿ ಕೋವಿಡ್ (Covid) ಕೇಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಇಳಿಕೆಯಾಗಿದೆ. ಒಂದು ಬ್ಯಾರೆಲ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯಟ್ ಕಚ್ಚಾ ತೈಲ ದರ 74 ಡಾಲರ್ ಗೆ (6,040 ರೂ.) ಇಳಿಕೆಯಾಗಿದೆ.
ಡಿಸೆಂಬರ್ ಬಳಿಕ ರಷ್ಯಾ ಉಕ್ರೇನ್ ಯುದ್ಧದಿಂದ 139 ಡಾಲರ್ ಗೆ ಏರಿಕೆಯಾಗಿದ್ದ ದರ ಮೊದಲ ಬಾರಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಚೀನಾದಲ್ಲಿ ಕೋವಿಡ್ ನಿಯಂತ್ರಣ ಮಾಡಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು ಬಿಗಿಯಾದ ಲಾಕ್ ಡೌನ್ ಜಾರಿ ಮಾಡಿದೆ. ಪರಿಣಾಮ ಭಾರೀ ಸಂಖ್ಯೆಯಲ್ಲಿ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ : – ಬಿಜೆಪಿ ಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಮೊದಲು ಅದನ್ನು ನೋಡಿಕೊಳ್ಳಲಿ – ಡಿ.ಕೆ ಶಿವಕುಮಾರ್
ತೈಲ, ಕಬ್ಬಿಣದ ಅದಿರು ಮತ್ತು ಸೋಯಾಬೀನ್ಗಳನ್ನು ಚೀನಾ ಭಾರೀ ಪ್ರಮಾಣದಲ್ಲಿ ಆಮದು ಮಾಡುತ್ತಿದೆ. ಆರ್ಥಿಕತೆಯು ಮುಗ್ಗರಿಸಿದ್ದರಿಂದ ಈ ವರ್ಷ ಈಗಾಗಲೇ ಖರೀದಿಗಳು ನಿಧಾನಗೊಂಡಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬಿದ್ದಿದೆ. ಚೀನಾದಲ್ಲಿ ಭಾನುವಾರ 39,791 ಕೇಸ್ ದಾಖಲಾಗಿದ್ದರೆ ಸೋಮವಾರ 40,052 ಕೊರೊನಾ ಕೇಸ್ ದಾಖಲಾಗಿವೆ.
ಸಾಧಾರಣವಾಗಿ ಚೀನಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುವುದು ಬಹಳ ಅಪರೂಪ. ಆದರೆ ಈಗ ಸರ್ಕಾರದ ಕಠಿಣ ನಿಯಮಕ್ಕೆ ರೋಸಿ ಹೋಗಿ ಜನ ಬೀದಿಗೆ ಇಳಿದಿದ್ದು ಅಧ್ಯಕ್ಷ ಕ್ಸಿ ಜಿನ್ಪಿಂಗ್ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ.
ಇದನ್ನೂ ಓದಿ : – FIFA WORLD CUP – ಕೆನಡಾವನ್ನು ಹೊರದಬ್ಬಿದ ಕ್ರೊಯೇಷಿಯಾ