ಮುಂಬೈ: ತಾಯಿ ಟಿವಿ ಆಫ್ ಮಾಡಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನ್ಲೈನ್ ತರಗತಿಗಳು ಮುಗಿದ ನಂತರ ತನ್ನ ಹೋಮ್ವರ್ಕ್ ಮಾಡಿದ ಬಾಲಕ ಬಳಿಕ ಟಿವಿ ನೋಡಲು ಕುಳಿತಿದ್ದಾನೆ. ಸರಿಯಾಗಿ ಕುಳಿತುಕೊಂಡು ಟಿವಿ ನೋಡು, ಇಲ್ಲದಿದ್ದರೆ ಟಿವಿ ಆಫ್ ಮಾಡುತ್ತೇನೆ ಎಂದು ತಾಯಿ ಹೇಳಿದ್ದಾರೆ. ಇದರಿಂದ ಕೋಪ ಮಾಡಿಕೊಂಡ ಬಾಲಕ ಬಾತ್ರೂಂಗೆ ತೆರಳಿ ನೇಣು ಹಾಕಿಕೊಂಡಿದ್ದಾನೆ. ಕೆಜ್ ಗ್ರಾಮದಲ್ಲಿ ಘಟನೆ ನಡೆದಿದೆ.
ಮಗ ತುಂಬಾ ಹೊತ್ತಿನಿಂದ ಆಚೆ ಬಾರದ ಕಾರಣ ಅಕ್ಕ ಮತ್ತು ಬಾಲಕನ ತಾಯಿ ಬಾತ್ರೂಂಗೆ ತೆರಳಿದಾಗ ಮಗ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಮಗನನ್ನು ನೋಡಿದ ತಾಯಿ ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಲಾಗಿದೆ.