ಹಾಸನ : ಆಸ್ತಿ ವಿಚಾರಕ್ಕೆ ನಡೆದ ಜಗಳದಲ್ಲಿ ನಾಲ್ಕು ಜನರು ಕೊಲೆಯಾಗಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮುರುಗೋಡನಹಳ್ಳಿಯಲ್ಲಿ ನಡೆದಿದೆ.
ಎರಡು ಕಾಲು ಏಕರೆ ಜಮೀನಿಗಾಗಿ ಪಾಪಣ್ಣ ಹಾಗೂ ಮಲ್ಲೇಶ್ ಕುಟುಂಬಗಳ ನಡುವೆ ಜಗಳವಿತ್ತು. ಇಂದು ಮಲ್ಲೇಶನ ಪರವಾಗಿ ನ್ಯಾಯಾಲಯದ ತೀರ್ಪು ಬಂದಿದ್ದರಿಂದ ಪಾಪಣ್ಣ ಹಾಗೂ ಸ್ವಾಮಿ ಗೌಡರ ಎನ್ನುವವರು ಮಲ್ಲೇಶನ ಕುಟುಂಬದ ಜೊತೆ ಜಮೀನಲ್ಲಿ ಜಗಳ ತೆಗೆದಿದ್ದಾರೆ.
ಘಟನೆಯಲ್ಲಿ ರವಿಕುಮಾರ್ (32), ಮಲ್ಲೇಶ್ (58), ಮಂಜೇಶ (35) ಮೃತಪಟ್ಟಿದ್ದಾರೆ. ಎದುರು ಗುಂಪಿನ ಪಾಪಣ್ಣ (45) ಚಿಕಿತ್ಸೆ ಪಲಕಾರಿಯಾಗದೇ ಹಾಸನದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮೃತ ದೇಹಗಳನ್ನು ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹೊಳೆನರಸೀಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.