ಕೋಲಾರ: ಕುಟುಂಬ ಕಲಹ ಹಿನ್ನೆಲೆ ಹೆಂಡತಿಯನ್ನ ಕೊಂದು ಗಂಡ ನೇಣಿಗೆ ಶರಣಾಗಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಆಡಂಪಲ್ಲಿ ಗ್ರಾಮದಲ್ಲಿ ಜರುಗಿದೆ.
ಹೆಂಡತಿ ಶೈಲಾ (19) ಚಾಕುವಿನಿಂದ ಇರಿದು ಕೊಂದಿರುವ ಪಾಪಿ ಪತಿಯಾಗಿದ್ದು, ನಂತರ ತಾನೂ ನೇಣಿ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮುರಗೇಶ್ (26) ಮೃತ ದುರ್ದೈವಿಯಾಗಿದ್ದಾರೆ.
ಇನ್ನು ಪ್ರೀತಿಸಿ ಮದುವೆಯಾದ ನಂತರ ಇಬ್ಬರೂ ಅನ್ಯೋನ್ಯವಾಗಿದ್ದರು. ಆದೇನಾಯ್ತೋ ಏನೋ ಗೊತ್ತಿಲ್ಲ ಯುಗಾದಿ ಹಬ್ಬಕ್ಕೆಂದ ಬಂದರುವ ಶವವಾಗಿ ಪತ್ತೆಯಾಗಿದ್ದಾರೆ.
ಸ್ಥಳಕ್ಕೆ ಬೇತ ಮಂಗಲ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಇಬ್ಬರ ಶವವನ್ನು ಮರಣೋತ್ತರ ಪರೀಕ್ಷೆಗೆ ಕೋಲಾರ ಆರ್. ಎಲ್ ಜಾಲಪ್ಪ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಬೇತಮಂಗಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.