ಬಾಗಲಕೋಟೆ : ಕ್ರೂಸರ್ ಹರಿದು ಆರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 218 ಬಳಿ ನಡೆದಿದೆ.
ಗೋಳಪ್ಪ ಪೂಜಾರಿ (06) ಮೃತ ಬಾಲಕ. ತೋಟದ ಪಕ್ಕದ ರಸ್ತೆದಾಟುವ ವೇಳೆ ಘಟನೆ ನಡೆದಿದ್ದು, ಕ್ರೂಸರ್ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದು, ಚಾಲಕನಿಗಾಗಿ ಪೋಲಿಸರು ಜಾಲ ಬೀಸಿದ್ದಾರೆ. ಬಾಲಕನ ಕುಟುಂಬಸ್ಥರ ಮುಗಿಲು ಮುಟ್ಟಿದ ಆಕ್ರದನ ಮುಗಿಲು ಮುಟ್ಟಿದೆ
ಘಟನಾ ಸ್ಥಳಕ್ಕೆ ಬೀಳಗಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಬೀಳಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.