ಕೆಳ ಕ್ರಮಾಂಕದಲ್ಲಿ ನಿತಿನ್ ರಾಣಾ ಹಾಗೂ ದಿನೇಶ್ ಕಾರ್ತಿಕ್ ಅವರ ಸಿಡಿಲಬ್ಬರದ ಆಟದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ 172 ರನ್ ಗಳ ಕಠಿಣ ಗುರಿ ಒಡ್ಡುವಲ್ಲಿ ಯಶಸ್ವಿಯಾಗಿದೆ.
ಅಬುಧಾಬಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 176 ರನ್ ಗಳಿಸಿತು.
ಚೆನ್ನೈ ತಂಡದ ಶಿಸ್ತಿನ ದಾಳಿಗೆ ರನ್ ಗಳಿಸಲು ಪರದಾಡಿದ ಕೆಕೆಆರ್ ಒಂದು ಹಂತದಲ್ಲಿ 16.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿತ್ತು.
ಈ ಹಂತದಲ್ಲಿ ಜೊತೆಯಾದ ಕಾರ್ತಿಕ್ ಮತ್ತು ರಾಣಾ ಹೊಡಿಬಡಿ ಆಟಕ್ಕಿಳಿದು ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಕಾರ್ತಿಕ್ 11 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 26 ರನ್ ಸಿಡಿಸಿದರೆ, ರಾಣಾ 27 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 37 ರನ್ ಗಳಿಸಿದರು.
ಇದಕ್ಕೂ ಮುನ್ನ ರಾಹುಲ್ ತ್ರಿಪಾಠಿ (45 ರನ್, 33 ಎಸೆತ), ಆಂಡ್ರೆ ರಸೆಲ್ (20), ವೆಂಕಟೇಶ್ ಅಯ್ಯರ್ (18) ರನ್ ಗಳಿಸಿದರು. ಚೆನ್ನೈ ಪರ ಜೋಷ್ ಹಾಜ್ಲೆವುಡ್, ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಗಳಿಸಿದರು.