ಬರ್ಮಿಂಗ್ ಹ್ಯಾಮ್ (Burming ham) ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ (Common wealth) ಕ್ರೀಡಾಕೂಟದ ಕೊನೆಯ ದಿನದಂದು ಭಾರತ ಮತ್ತೆ ಎರಡು ಚಿನ್ನದ ಪದಕ ( 2 Golden medals) ಗಳನ್ನು ಗೆದ್ದಿದೆ.
ಟೇಬಲ್ ಟೆನ್ನಿಸ್ (Table tennis) ನ ಸಿಂಗಲ್ಸ್ ವಿಭಾಗದಲ್ಲಿ ಶರತ್ ಕಮಲ್ (Sharath kamal) ಇಂಗ್ಲೆಂಡ್ ನ ಲಿಯಾಮ್ ಪಿಚ್ಫೋರ್ಡ್ ನ್ನು ಫೈನಲ್ಸ್ ನಲ್ಲಿ 4-1 ಅಂತರದಿಂದ ಮಣಿಸಿ ಸ್ವರ್ಣ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಬ್ಯಾಡ್ಮಿಂಟನ್ (Badmiton ) ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್-ಚಿರಾಗ್ (Sathwik -chirag) ಜೋಡಿ ಇಂಗ್ಲೆಂಡ್ ನ ಲೇನ್- ವೆಂಡಿ ಜೋಡಿಯ ವಿರುದ್ಧ ಜಯ ಗಳಿಸಿದ್ದು ಚಿನ್ನದ ಪದಕ ಗೆದ್ದಿದ್ದಾರೆ. ಇದನ್ನು ಓದಿ : – ಪಾಕಿಸ್ತಾನವನ್ನು ಬಗ್ಗುಬಡಿದ ಭಾರತೀಯ ದೀಪಕ್ ಪೂನಿಯಾಗೆ ಚಿನ್ನದ ಹಾರ
ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೂ ಭಾರತಕ್ಕೆ ಒಟ್ಟು 60 ಪದಕಗಳು ಬಂದಿದ್ದು 22 ಚಿನ್ನ, 15 ಬೆಳ್ಳಿ ಹಾಗೂ 23 ಕಂಚು ಸೇರಿದೆ. ಪದಕ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.
ಇದನ್ನು ಓದಿ : – ಕಾಮನ್ ವೆಲ್ತ್ ಬ್ಯಾಡ್ಮಿಂಟನ್ ನಲ್ಲಿ ಚಿನ್ನದ ಪದಕ ಗೆದ್ದ ಪಿವಿ ಸಿಂಧು