75 ನೇ ಸ್ವತಂತ್ರೋತ್ಸವ ಅಂಗವಾಗಿ 75 ಕಿ.ಮೀ ಸೈಕಲ್ ಜಾಥಾವನ್ನ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಸೈಕಲ್ ಜಾಥಾದಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಎಸ್.ಮುನಿಸ್ವಾಮಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಇನ್ನು ತೇಜಸ್ವಿ ಸೂರ್ಯ ಹಾಗೂ ಮುನಿಸ್ವಾಮಿ ನೇತೃತ್ವದ ಸೈಕಲ್ ಜಾಥಾವು ಮೊದಲು ಬೆಂಗಳೂರಿನ ವಿಧಾನಸೌಧದಿಂದ ಹೊರಟು ಕೋಲಾರಕ್ಕೆ ಆಗಮಿಸಿದರು. ಕೋಲಾರ ನಗರದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಜಾಥ ಸಂಚರಿಸಿ ಸಂಚಲನ ಮೂಡಿಸಿದರು. ಇನ್ನು ಕೋಲಾರದ ಗಡಿಗೆ ಸೈಕಲ್ ಜಾಥ ಆಗಮಿಸುತ್ತಿದ್ದಂತೆ ಹೆದ್ದಾರಿಯಲ್ಲಿ ಹೂವಿನ ಸುರಿಮಳೆ ಸುರಿಸಿ ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಿದ್ರು,
ಇದನ್ನು ಓದಿ :- ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸರ್ಕಾರ ಸಕಲ ತಯಾರಿ ಮಾಡಿಕೊಂಡಿದೆ – ಸಿಎಂ ಬೊಮ್ಮಾಯಿ
ಸೈಕಲ್ ಜಾಥಾ ಹಿನ್ನೆಲೆ ಕೋಲಾರ ನಗರದಾದ್ಯಂತ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು, ಸೈಕಲ್ ಜಾಥಾ ಕಾರ್ಯಕ್ರಮ ಕೋಲಾರ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಅಂತ್ಯಗೊಳಿಸಿದ್ರು,
ಇದನ್ನು ಓದಿ :- ಜಿಮ್ ನಲ್ಲಿ ವರ್ಕೌಟ್ ಮಾಡೋವಾಗ ಹುಷಾರ್….! ಕುಸಿದು ಬಿದ್ದು ಮಹಿಳೆ ಸಾವು