ತಮಿಳುನಾಡಿನಲ್ಲಿ ಮಾಂಡೌಸ್ ಚಂಡಮಾರುತದ ಅಬ್ಬರ – ತಿರುವಳ್ಳೂರ್, ಕಾಂಚೀಪುರಂನಲ್ಲಿ ಇಂದು ಶಾಲೆಗಳಿಗೆ ರಜೆ

ಮಾಂಡೌಸ್ ಚಂಡಮಾರುತದ ಪ್ರಭಾವದಿಂದಾಗಿ ತಮಿಳುನಾಡಿ ( THAMIL NADU ) ನಲ್ಲಿ ಸುರಿಯುತ್ತಿರುವ ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ.

ಮಾಂಡೌಸ್ ಚಂಡಮಾರುತದ ಪ್ರಭಾವದಿಂದಾಗಿ ತಮಿಳುನಾಡಿ ( THAMIL NADU ) ನಲ್ಲಿ ಸುರಿಯುತ್ತಿರುವ ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿರುವ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವೆಡೆ ಭೂಕುಸಿತ ಉಂಟಾಗಿದ್ದು, ನೂರಾರು ಮರಗಳು ಧರೆಗುರುಳಿದೆ.  ಇಂದು ಕೂಡ ತಮಿಳುನಾಡಿನ ಹಲವೆಡೆ ಭಾರೀ ಮಳೆಯಾಗುವ ಸೂಚನೆ ಇರುವುದರಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Heavy Rains to Lash Chennai on March 4-5; IMD Issues Red Warning for  Multiple Districts in Tamil Nadu | The Weather Channel

ಕಾಂಚೀಪುರಂ ( KANCIPURAM ) ಜಿಲ್ಲೆಯಲ್ಲದೆ ತಿರುವಳ್ಳೂರು ಮತ್ತು ಉತ್ತುಕೊಟ್ಟೈ ತಾಲೂಕುಗಳು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ. ಮಾಂಡೌಸ್ ಚಂಡಮಾರುತವು ಈಗಾಗಲೇ ಮಾಮಲ್ಲಪುರಂನಲ್ಲಿ ಕರಾವಳಿಯನ್ನು ದಾಟಿರುವುದರಿಂದ ಇಂದು ಕೂಡ ತಿರುವಳ್ಳೂರು ಮತ್ತು ಉತ್ತುಕೊಟ್ಟೈ ತಾಲೂಕುಗಳ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ. ಇಂದು ಬಂಗಾಳಕೊಲ್ಲಿ ( BANGALA KOLI ) ಯಲ್ಲಿ ಚಂಡಮಾರುತದ ಪರಿಚಲನೆ ಮತ್ತು ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳುವ ಸಾಧ್ಯತೆಯಿರುವುದರಿಂದ ಡಿಸೆಂಬರ್ 15 ರವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಇದನ್ನು ಓದಿ : –  ಅಪ್ಪ-ಮಕ್ಕಳು, ಅಣ್ತಮ್ಮಂದಿರಿಗೆ ಟಿಕೆಟ್ ಸಿಗಲ್ಲ – ಬಸನಗೌಡ ಪಾಟೀಲ್ ಯತ್ನಾಳ್

IMD issues heavy rain alert for Tamil Nadu, Andhra Pradesh; check latest  forecast - BusinessToday

ಇದರಿಂದಾಗಿ ತಮಿಳುನಾಡಿನ ಹಲವೆಡೆ ಶಾಲೆಗಳನ್ನು ಡಿಸೆಂಬರ್ 15ರವರೆಗೂ ಮುಚ್ಚಲ್ಪಡುತ್ತವೆ ಎಂದು ನಿರೀಕ್ಷಿಸಲಾಗಿದೆ. ಮಾಂಡೌಸ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದಾಗಿ ಇಂದು ಚೆನ್ನೈ ನಲ್ಲಿ ಶಾಲೆಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಚೆನ್ನೈ ಮತ್ತು ತಮಿಳುನಾಡಿನ ಹಲವಾರು ಭಾಗಗಳಲ್ಲಿ ನಿನ್ನೆ ಭಾರೀ ಮಳೆಯಾಗಿದೆ. ಕಾಂಚೀಪುರಂ ಜಿಲ್ಲೆ ಮಾತ್ರವಲ್ಲದೆ ತಿರುವಳ್ಳೂರು ಮತ್ತು ಉತ್ತುಕೊಟ್ಟೈ ತಾಲೂಕುಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಇದನ್ನು ಓದಿ : – ಸಂಸದರು ಯಾರೊಬ್ಬರ ಜಾತಿ, ಧರ್ಮ ಉಲ್ಲೇಖಿಸಿದರೆ ಕ್ರಮ- ಸ್ಪೀಕರ್ ಓಂ ಬಿರ್ಲಾ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!